ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 10ಸಾವಿರ ಮತಗಳಿಂದ ನಾನು ವಿಜಯಿಯಾಗಿದ್ದೇನೆ ಎಂದು ಗೆದ್ದಷ್ಟೇ ಸಂತೋಷದಿಂದ ಬೀಗಿದವರು ಮಾಜಿ ಸಚಿವ ಬೆಂಕಿ ಮಹದೇವು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದು ಆಗಲೇ 15 ದಿನಗಳಾಗಿದೆ. ಕಾರ್ಯಕರ್ತರಿಗೆ ಬೇಸರವಾಗಬಾರದೆಂದು ಅವರ ಜೊತೆ ಓಡಾಡಿಕೊಂಡಿದ್ದೆ ಎಂದು ಖುಷಿಯಿಂದ ಹೇಳಿಕೊಂಡರು.
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ ಎಂದು ಅವರು, ತಮ್ಮ ಸ್ವಕ್ಷೇತ್ರವಾದ ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಮಹದೇವಯ್ಯ ಅವರಿಗೆ ಗೆಲುವು ಖಚಿತ ಎಂದು ಆತ್ಮವಿಶ್ವಾಸದಿಂದ ನುಡಿದರು.
ತನ್ನ ಅಧಿಕಾರವಾಧಿಯಲ್ಲಿ ಯಾವುದೇ ಭ್ರಷ್ಟಚಾರಕ್ಕೆ ಅವಕಾಶ ನೀಡಿಲ್ಲ. ಕಾನೂನು ಮೀರಿ ಕೆಲಸ ಮಾಡುವ ಅಧಿಕಾರಿಯನ್ನು 24 ಗಂಟೆಯೊಳಗೆ ಹೊರ ಹಾಕುತ್ತೇನೆ ಎಂದು ಅವರು ತಿಳಿಸಿದರು.
|