ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓಬಳಾಪುರಂ ಮೈನ್ಸ್‌ನಲ್ಲಿ ಅಕ್ರಮವಿಲ್ಲ:ರೆಡ್ಡಿ ಸ್ಪಷ್ಟನೆ
ಬಳ್ಳಾರಿ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಈಗ ಚುನಾವಣಾ ರಂಗು ತಾರಕ್ಕೇರಿದೆ. ಇತ್ತೀಚೆಗಷ್ಟೆ ಜೆಡಿಎಸ್‍ನಿಂದ ಹೊರಬಂದಿರುವ ಮಾಜಿ ಸಚಿವ ದಿವಾಕರ್ ಬಾಬು ಕೈ ಹಿಡಿದಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಈ ಬೆಳವಣಿಗೆಯಿಂದ ಬಳ್ಳಾರಿಯ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ಮುಖದಲ್ಲಿ ಈಗ ಮಂದಹಾಸ ಮೂಡಿದೆ.

ಈಗ ಆಂಧ್ರ ಮುಖ್ಯಮಂತ್ರಿ ಡಾ. ವೈ.ಎಸ್. ರಾಜಶೇಖರ್ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಪರ ಪ್ರಚಾರಕ್ಕಾಗಿ ಬಳ್ಳಾರಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಉತ್ತಮ ಆಡಳಿತ ಸಾಧ್ಯ. ಈ ಮೂಲಕ ಆಂಧ್ರ ಮಾದರಿಯ ಅಭಿವೃದ್ದಿಯನ್ನು ರಾಜ್ಯದಲ್ಲೂ ಕಾಣಬಹುದು ಎಂದು ಅವರ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಳ್ಳಾರಿ ಅಕ್ರಮ ಗಣಿಗಾರಿಕೆ ಕುರಿತು ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಬಳ್ಳಾರಿ ಬಳಿಯ ಓಬಳಾಪುರಂ ಮೈನ್ಸ್‌ನಲ್ಲಿ ಅಂತಹ ಯಾವುದೇ ಚಟುವಟಿಕೆಗಳು ನಡೆದಿಲ್ಲ. ಅಲ್ಲದೆ, ಕರ್ನಾಟಕ ಹಾಗೂ ಆಂಧ್ರ ನಡುವೆ ಯಾವುದೇ ಗಡಿ ವಿವಾದ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಮತ್ತಷ್ಟು
ಭಯೋತ್ಪಾದನೆಗೆ ಕಾಂಗ್ರೆಸ್ ಶರಣಾಗಿಲ್ಲ: ರಾಹುಲ್
ಫಲಿತಾಂಶ ಬರದೇ ಬೆಂಕಿಗೆ ಗೆಲುವು
ಬಿಜೆಪಿಯದು ಕನಸೇಂದ: ಸಿದ್ದು
ರಾಜ್ ಪುತ್ಥಳಿ ವಿರೂಪ ಕನ್ನಡ ಸಂಘಟನೆಗಳ ಪ್ರತಿಭಟನೆ
ನ್ಯಾಯಾಲಯದಲ್ಲಿ ಸ್ಪೋಟ:ರಾಜ್ಯಾದ್ಯಂತ ಕಟ್ಟೆಚ್ಚರ
ಮರುಮತದಾನದ ಮಾಹಿತಿ ಇಲ್ಲದ ಬೇಗ್