ನಗರದ ನ್ಯಾಯಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಬಾಂಬ್ ಸ್ಪೋಟದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದೆ.
ಅಜ್ಮೀರ್ ಹಾಗೂ ಹೈದರಾಬಾದ್ ಬಾಂಬ್ ಸ್ಪೋಟದ ಹಿಂದಿರುವ ಭಯೋತ್ಪಾದಕ ಸಂಘಟನೆಗಳೇ ಈ ಸ್ಪೋಟದಲ್ಲೂ ಭಾಗಿಯಾಗಿತ್ತು ಎಂಬ ಅಂಶವನ್ನು ದಿಲ್ಲಿ ಹಾಗೂ ಬೆಂಗಳೂರಿನಿಂದ ಆಗಮಿಸಿರುವ ವಿಶೇಷ ತಂಡದ ಹಿರಿಯ ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ.
ಈ ಮಧ್ಯೆ ಸ್ಪೋಟದ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ನಾರಾಯಣ ನಡಮನಿ, ಸ್ಪೋಟಗೊಂಡಿರುವ ಕೋರ್ಟ್ ಆವರಣದಲ್ಲಿ ಸಿಮ್ ಕಾರ್ಡ್ವೊಂದು ದೊರೆತಿದೆ. ಅಂತೆಯೇ ಸ್ಪೋಟಕ್ಕೆ ಸಂಬಂಧಿಸಿದ ಇನ್ನಿತರ ವಸ್ತುಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸ್ಪೋಟದ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಾಗಿದ್ದು, ಸ್ಪೋಟದಲ್ಲಿ ಐಎಸ್ಐ ಕೈವಾಡವಿರುವ ಬಗ್ಗೆ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸಮಗ್ರ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
|