ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದು ಕರೀಂ ಲಾಲಾ ತೆಲಗಿ ಬೆಂಗಳೂರಿಗೆ
ಬಹುಕೋಟಿ ಛಾಪಾಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿಯನ್ನು ಮುಂಬೈನ ಯೆರವಾಡ ಜೈಲಿನಿಂದ ಮಂಗಳವಾರ ಬೆಂಗಳೂರು ಕಾರಾಗೃಹಕ್ಕೆ ಕರೆತರಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಬೆಂಗಳೂರಿಗೆ ವರ್ಗಾಯಿಸುವಂತೆ ಇತ್ತೀಚೆಗೆ ಮುಂಬೈನ ನ್ಯಾಯಾಲಯವು ವಿಚಾರಣೆ ವೇಳೆ ಆದೇಶ ಹೊರಡಿಸಿತ್ತು. ಆದೇಶದಂತೆ ಕಳೆದ ವಾರವೇ ನಗರಕ್ಕೆ ಕರೆದುಕೊಂಡು ಬರಬೇಕಿತ್ತಾದರೂ, ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಭದ್ರತೆ ಸಮಸ್ಯೆಯಾಗಬಹುದೆಂದು ಪೊಲೀಸ್ ಇಲಾಖೆ ತಿಳಿಸಿತ್ತು.

ಈ ಮಧ್ಯೆ ಅಬ್ದುಲ್ ಕರೀಂ ತೆಲಗಿ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ತೆಲಗಿಗೆ ಇರುವ ಕಾಯಿಲೆಗೆ ನಗರದಲ್ಲಿಯೇ ಓಷಧಿ ದೊರೆಯುತ್ತದೆ ಎಂಬ ಕಾರಣದಿಂದಾಗಿಯೂ ಬೆಂಗಳೂರಿಗೆ ವರ್ಗಾಯಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿನ ಒಟ್ಟು 10 ಪ್ರಕರಣಗಳ ಪೈಕಿ ಒಂದರಲ್ಲಿ ತೆಲಗಿಯನ್ನು ದೋಷಮುಕ್ತ ಎಂದು ಇತ್ತೀಚೆಗೆ ನಗರದ ನ್ಯಾಯಾಲಯವೊಂದು ಪ್ರಕಟಿಸಿತ್ತು.
ಮತ್ತಷ್ಟು
ದಿ 24ರಂದು: ಅಕ್ರಮ ಗಣಿಗಾರಿಕೆ ವರದಿ ಪ್ರಕಟ
'ಸಾಲಮನ್ನಾ, ಮಹಿಳಾ ಮೀಸಲಾತಿ ಕಾಂಗ್ರೆಸ್ ಸಾಧನೆ'
ಹುಬ್ಬಳ್ಳಿ ಬಾಂಬ್ ಸ್ಫೋಟ: ಚುರುಕುಗೊಂಡ ತನಿಖೆ
ಶೀಘ್ರದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ: ಚಿದು
ಓಬಳಾಪುರಂ ಮೈನ್ಸ್‌ನಲ್ಲಿ ಅಕ್ರಮವಿಲ್ಲ:ರೆಡ್ಡಿ ಸ್ಪಷ್ಟನೆ
ಭಯೋತ್ಪಾದನೆಗೆ ಕಾಂಗ್ರೆಸ್ ಶರಣಾಗಿಲ್ಲ: ರಾಹುಲ್