ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಆತಂಕವಾದಿಗಳಿಗೆ ಬೆಂಬಲ:ಸುಷ್ಮಾ ಆರೋಪ
ಪೋಟಾ ಕಾಯಿದೆಯನ್ನು ರದ್ದು ಪಡಿಸುವ ಮೂಲಕ ಕಾಂಗ್ರೆಸ್ ಆತಂಕವಾದಿಗಳಿಗೆ ಬೆಂಬಲ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಆಪಾದಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ಅವರು, ಉತ್ತರ ರಾಜ್ಯಗಳಲ್ಲಿ ಇದ್ದ ಭಯೋತ್ಪಾದನೆ ಇಂದು ದಕ್ಷಿಣಕ್ಕೂ ಹರಡಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ಧರ್ಮ. ಆದರೆ, ಅಫ್ಜಲ್ ಗುರುವಿಗೆ ಮರಣ ದಂಡನೆ ವಿಧಿಸದೆ ಕಾಂಗ್ರೆಸ್ ಭಯೋತ್ಪಾದನೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ತಿಳಿಸಿದರು.

ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪೋಟಾ ಕಾಯಿದೆಯನ್ನು ಜಾರಿಗೆ ತಂದಿತ್ತು. ಆದರೆ ಇದು ಮುಸ್ಲಿ ವಿರೋಧಿಯಾಗಿರಲಿಲ್ಲ ಬದಲಾಗಿ ತಪ್ಪಿಸ್ಥರಿಗೆ ಉಗ್ರ ಶಿಕ್ಷೆ ವಿಧಿಸುವ ಕಾನೂನು ಆಗಿತ್ತು ಎಂದು ಅವರು ತಿಳಿಸಿದರು.

ಬೆಲೆ ಏರಿಕೆಯಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಬೆಲೆ ನಿಯಂತ್ರಣ ಮಾಡುವಲ್ಲಿ ಕೇಂದ್ರದ ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಕಾಂಗ್ರೆಸ್ಸನ್ನು ದೂರಿದರು.
ಮತ್ತಷ್ಟು
ಇಂದು ಕರೀಂ ಲಾಲಾ ತೆಲಗಿ ಬೆಂಗಳೂರಿಗೆ
24ರಂದು ಅಕ್ರಮ ಗಣಿಗಾರಿಕೆ ವರದಿ ಪ್ರಕಟ
'ಸಾಲಮನ್ನಾ, ಮಹಿಳಾ ಮೀಸಲಾತಿ ಕಾಂಗ್ರೆಸ್ ಸಾಧನೆ'
ಹುಬ್ಬಳ್ಳಿ ಬಾಂಬ್ ಸ್ಫೋಟ: ಚುರುಕುಗೊಂಡ ತನಿಖೆ
ಶೀಘ್ರದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ: ಚಿದು
ಓಬಳಾಪುರಂ ಮೈನ್ಸ್‌ನಲ್ಲಿ ಅಕ್ರಮವಿಲ್ಲ:ರೆಡ್ಡಿ ಸ್ಪಷ್ಟನೆ