ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಪರ ನಿಂತ ರವಿ ಬೆಳಗೆರೆ
ಗಣಿ ರಾಜಕಾರಣ ಮತ್ತೆ ಗರಿಗೆದರಿ ನಿಂತಿದೆ. ಬಳ್ಳಾರಿ ನಗರದ ಜೆಡಿಎಸ್ ಅಭ್ಯರ್ಥಿ ದಿವಾಕರ್ ಬಾಬು ಚುನಾವಣಾ ಮೈದಾನದಿಂದ ಹಿಂದಕ್ಕೆ ಸರಿದಿದ್ದಾರೆ. ಈ ಬೆಳವಣಿಗೆಯಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಸ್ಪಷ್ಟವಾಗಿದೆ.

ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವ ಅನಿಲ್ ಲಾಡ್ ಹಾಗೂ ಬಿಜೆಪಿಯ ಸೋಮಶೇಖರ್ ರೆಡ್ಡಿ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಚುನಾವಣಾ ಕಾವು ತಾರಕಕ್ಕೇರಿದೆ. ಸೋಮಶೇಖರ್ ರೆಡ್ಡಿ ಆಪ್ತರಾದ ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಕೂಡ ಈಗ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಈ ಬಗ್ಗೆ ವಿವರಣೆ ನೀಡಿದ ರವಿ ಬೆಳೆಗೆರೆ, ತಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿಲ್ಲ ಬದಲಾಗಿ ವ್ಯಕ್ತಿಯ ಪರವಾಗಿ ಪ್ರಚಾರಕ್ಕಿಳಿದಿದ್ದೇನೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಇನ್ನೊರ್ವ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರವಾಗಿಯೂ ಪ್ರಚಾರಕ್ಕೆ ಹೋಗುವುದಾಗಿ ತಿಳಿಸಿದ ಅವರು, ಅಭ್ಯರ್ಥಿಗಳು ಗೆದ್ದಲ್ಲಿ ಬಳ್ಳಾರಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸುತ್ತಾರೆ ಎಂಬ ವಿಶ್ವಾಸ ತನ್ನಲಿದೆ ಎಂದಿದ್ದಾರೆ.
ಮತ್ತಷ್ಟು
ಯಡಿಯೂರಪ್ಪ ಸೋಲುವುದು ನಿಶ್ಚಿತ: ಅಮರಸಿಂಗ್
ಕಾಂಗ್ರೆಸ್ ಆತಂಕವಾದಿಗಳಿಗೆ ಬೆಂಬಲ:ಸುಷ್ಮಾ ಆರೋಪ
ಇಂದು ಕರೀಂ ಲಾಲಾ ತೆಲಗಿ ಬೆಂಗಳೂರಿಗೆ
24ರಂದು ಅಕ್ರಮ ಗಣಿಗಾರಿಕೆ ವರದಿ ಪ್ರಕಟ
'ಸಾಲಮನ್ನಾ, ಮಹಿಳಾ ಮೀಸಲಾತಿ ಕಾಂಗ್ರೆಸ್ ಸಾಧನೆ'
ಹುಬ್ಬಳ್ಳಿ ಬಾಂಬ್ ಸ್ಫೋಟ: ಚುರುಕುಗೊಂಡ ತನಿಖೆ