ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓಟಿಗೆ ನೋಟು: ಬಳ್ಳಾರಿಯಲ್ಲಿ 8 ಸೆರೆ, ನಾಲ್ಕು ವಾಹನ ವಶ  Search similar articles
ಆಯೋಗದ ಅಣತಿಯ ಮೇರೆಗೆ ಬಳ್ಳಾರಿಯ ಚುನಾವಣಾ ವೀಕ್ಷಕರಾಗಿ ಅಧಿಕಾರ ಸ್ವೀಕರಿಸಿಕೊಂಡ ರೇಮಂಡ್ ಪೀಟರ್ ಮೊದಲ ದಿನವೇ ಕಾರ್ಯಾಚರಣೆ ಪ್ರಾರಂಭಿಸಿದ್ದು, ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ನಡೆಸುತ್ತಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ.

ನಿನ್ನೆ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಚುನಾವಣಾ ವೀಕ್ಷಕರು ಕಾರ್ಯಾಚರಣೆ ನಡೆಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಸುಮಾರು 8 ಮಂದಿಯನ್ನು ಬಂಧಿಸಿದ್ದು, ನೋಂದಣಿಯಾಗದ ಎರಡು ಬೈಕ್ ಹಾಗೂ ಪ್ರಚಾರಕ್ಕೆ ಬಳಸಿಕೊಂಡಿದ್ದ 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ, ವಾಹನದಲ್ಲಿದ್ದ ಸಿಡಿ ಹಾಗೂ ಇತರ ಪ್ರಚಾರ ಸಾಮಗ್ರಿಗಳನ್ನು ವಶಪಡಿಸಿಕೊಂಡಿರುವ ಚುನಾವಣಾ ವೀಕ್ಷಕರು ಯಾವ ಪಕ್ಷಕ್ಕೆ ಸೇರಿದ್ದೆಂದು ಬಹಿರಂಗಗೊಳಿಸಿಲ್ಲ. ನಾಳೆ ಚುನಾವಣೆ ನಡೆಯಲಿರುವುದರಿಂದ ಇದನ್ನು ಗುಪ್ತವಾಗಿ ಇಡಲಾಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದರಿಂದ ಬಳ್ಳಾರಿಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಗವು ಬಳ್ಳಾರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಎಲ್ಲಾ ಕಡೆ ಹದ್ದಿನ ಕಣ್ಣಿಟ್ಟಿದೆ.
ಮತ್ತಷ್ಟು
ನಮಗೇ ಬಹುಮತ: 4 ಸಮೀಕ್ಷೆಯಿದೆ ಎಂದ ಮೊಯಿಲಿ
ಜೈಪುರ ಸ್ಪೋಟ:ರಾಜ್ಯದಾದ್ಯಂತ ಕಟ್ಟೆಚ್ಚರ
ಬಳ್ಳಾರಿ: ಬಿಜೆಪಿ-ಕಾಂಗ್ರೆಸ್ ನಡುವೆ ಪೈಪೋಟಿ
ಬಿಜೆಪಿ ಪರ ನಿಂತ ರವಿ ಬೆಳಗೆರೆ
ಯಡಿಯೂರಪ್ಪ ಸೋಲುವುದು ನಿಶ್ಚಿತ: ಅಮರಸಿಂಗ್
ಕಾಂಗ್ರೆಸ್ ಆತಂಕವಾದಿಗಳಿಗೆ ಬೆಂಬಲ:ಸುಷ್ಮಾ ಆರೋಪ