ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಲ್ಲಿ ಕಾಲರಾ, ಮುಂಜಾಗ್ರತಾ ಕ್ರಮ  Search similar articles
ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಬೆಳಕಿಗೆ ಬಂದ ಒಟ್ಟು 48 ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿಗೆ ಕಾಲರಾ ಇರುವುದು ದೃಢಪಟ್ಟಿದೆ. ಮಹದೇವಪುರದ ನಿವಾಸಿ ನವೀನ್ ಕುಮಾರ್ ಎಂಬವರು ಕಾಲರಾದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನವೀನ್ ಅವರಿಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದ್ದು ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಹ್ಯಾಂಗಿಂಗ್ ಡ್ರಾಪ್ಸ್ ವಿಧಾನದ ಮೂಲಕ ಕಾಲರಾ ಪ್ರಕರಣವನ್ನು ದೃಢಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಕಾಲರಾ ಸೋಂಕಿನಿಂದ ಬಳಲುತ್ತಿರುವ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಿದ್ದಾರೆ. ಕರುಳುಬೇನೆ ಪ್ರಕರಣ ನಗರದಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಈ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಡಾ. ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಮತ್ತಷ್ಟು
ಓಟಿಗೆ ನೋಟು: ಬಳ್ಳಾರಿಯಲ್ಲಿ 8 ಸೆರೆ, ನಾಲ್ಕು ವಾಹನ ವಶ
ನಮಗೇ ಬಹುಮತ: 4 ಸಮೀಕ್ಷೆಯಿದೆ ಎಂದ ಮೊಯಿಲಿ
ಜೈಪುರ ಸ್ಪೋಟ:ರಾಜ್ಯದಾದ್ಯಂತ ಕಟ್ಟೆಚ್ಚರ
ಬಳ್ಳಾರಿ: ಬಿಜೆಪಿ-ಕಾಂಗ್ರೆಸ್ ನಡುವೆ ಪೈಪೋಟಿ
ಬಿಜೆಪಿ ಪರ ನಿಂತ ರವಿ ಬೆಳಗೆರೆ
ಯಡಿಯೂರಪ್ಪ ಸೋಲುವುದು ನಿಶ್ಚಿತ: ಅಮರಸಿಂಗ್