ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಳಗಾವಿಯಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ  Search similar articles
ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಳಗಾವಿ ಮಾರ್ಕೆಟ್ ಪೊಲೀಸರು ಶಂಕಿತ ಉಗ್ರಗಾಮಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಅಲಿಕತ್ ಅಬ್ದುಲ್ ಗನಿ ಸೈಯದ್ ಎಂದು ಗುರುತಿಸಲಾಗಿದೆ.

ಬಂಧಿತ ಉಗ್ರನಿಂದ ಒಂದು ಲ್ಯಾಪ್ ಟಾಪ್ ಹಾಗೂ ಹ್ಯಾಂಡಿ ಕ್ಯಾಮೆರಾ, 28 ಸಿಡಿ ಹಾಗೂ 4 ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಬಾಬ್ರಿ ಮಸೀದಿ ಸಂಬಂಧಿತ ಗಲಭೆ ಹಾಗೂ ಗುಜರಾತ್ ದಂಗೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ.

ಬೆಳಗಾವಿ ಮೂಲದ ಈತ ಕಳೆದ 10 ವರ್ಷಗಳಿಂದ ಸಂಸಾರದೊಂದಿಗೆ ಲಂಡನಿನಲ್ಲಿ ವಾಸವಾಗಿದ್ದ. ನಗರದಲ್ಲಿ ಭಯೋತ್ಪಾದನೆಗೆ ಸೇರುವಂತೆ ಯುವಕರಿಗೆ ಪ್ರಚೋದನೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಈತನೊಂದಿಗೆ ಸಂಪರ್ಕವಿರುವ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಬಂಧಿಸಲಾಗಿರುವ ಉಗ್ರರೊಂದಿಗೆ ಈತನ ಸಂಪರ್ಕವಿತ್ತೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು
ಬಳ್ಳಾರಿ: ಜನಾರ್ದನ ರೆಡ್ಡಿ ಬಂಧನ, ಬಿಡುಗಡೆ
ಬೆಂಗಳೂರಲ್ಲಿ ಕಾಲರಾ, ಮುಂಜಾಗ್ರತಾ ಕ್ರಮ
ಓಟಿಗೆ ನೋಟು: ಬಳ್ಳಾರಿಯಲ್ಲಿ 8 ಸೆರೆ, ನಾಲ್ಕು ವಾಹನ ವಶ
ನಮಗೇ ಬಹುಮತ: 4 ಸಮೀಕ್ಷೆಯಿದೆ ಎಂದ ಮೊಯಿಲಿ
ಜೈಪುರ ಸ್ಪೋಟ:ರಾಜ್ಯದಾದ್ಯಂತ ಕಟ್ಟೆಚ್ಚರ
ಬಳ್ಳಾರಿ: ಬಿಜೆಪಿ-ಕಾಂಗ್ರೆಸ್ ನಡುವೆ ಪೈಪೋಟಿ