ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ನಾಟಕ ಮತ ಸಮರ-II: ಮತದಾನ ಆರಂಭ  Search similar articles
ರಾಜ್ಯದ ಮಧ್ಯಭಾಗದಲ್ಲಿ ಹರಡಿಕೊಂಡಿರುವ 10 ಜಿಲ್ಲೆಗಳ 66 ಕ್ಷೇತ್ರಗಳಿಗಾಗಿ 12,271 ಮತದಾನ ಕೇಂದ್ರಗಳಲ್ಲಿ ಎರಡನೇ ಹಂತದ ಮತದಾನ ಶುಕ್ರವಾರ ಬೆಳಿಗ್ಗೆ ಬಿಗಿ ಭದ್ರತೆಯ ನಡುವೆ ಆರಂಭವಾಯಿತು.

ಬಿರುಸಿನಿಂದ ಮತದಾನ ಪ್ರಾರಂಭಗೊಂಡಿದ್ದು, ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು ತಮ್ಮ ಮತ ಚಲಾಯಿಸಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ, ಮಾಜಿ ಸಚಿವ ವಿ.ಎಸ್. ಆಚಾರ್ಯ, ಸಂಸದ ಆಸ್ಕರ್ ಫರ್ನಾಂಡಿಸ್, ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಸಿ.ಟಿ. ರವಿ ತಮ್ಮ ಕುಟುಂಬದೊಂದಿಗೆ ಬಂದು ಹಕ್ಕನ್ನು ಚಲಾಯಿಸಿದರು.

ಚಿತ್ರದುರ್ಗ ವರದಿ: ಚಿತ್ರದುರ್ಗದಲ್ಲಿ ಮತದಾರರು ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ. ಈ ಪ್ರದೇಶದಲ್ಲಿ ಮೂಲಭೂತ ಸೌಕರ್ಯದ ಕೊರತೆ ಹಿನ್ನೆಲೆಯಲ್ಲಿ ಆಕ್ರೊಶಗೊಂಡ ಮತದಾರರು ಚುನಾವಣೆಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ. ಮತಹಾಕಿದ ಓರ್ವನಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ವರದಿಯಾಗಿದೆ.

ಅಂತೆಯೇ, ರಾಯಚೂರಿನ ಹಾಳವೆಂಕಟಾಪುರದಲ್ಲಿ ಮತದಾರರು ಚುನಾವಣೆಗೆ ಬಹಿಷ್ಕಾರ ಹಾಕಿರುವ ವರದಿ ಬಂದಿದೆ.

ಈ ಮಧ್ಯೆ, ಶಿಕಾರಿಪುರದಲ್ಲಿ ಮತದಾರ ಪಟ್ಟಿಯಲ್ಲಿ ಗೊಂದಲ ಕಂಡು ಬಂದಿದ್ದು, ಕಪ್ಪಳನಹಳ್ಳಿ ಗ್ರಾಮದ ಮತದಾರರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಈಗಾಗಲೇ ಶೇ.14ರಷ್ಟು ಮತದಾನವಾಗಿರುವ ವರದಿ ಬಂದಿದೆ. ಇದುವರೆಗೆ ಬೆಳಗ್ಗೆ 10 ಗಂಟೆ ವೇಳೆಗೆ 10 ಜಿಲ್ಲೆಗಳಲ್ಲಿ ಶೇ.9ರಷ್ಟು ಮತದಾನವಾಗಿರುವ ವರದಿ ಬಂದಿದೆ.

2589 ಅಭ್ಯರ್ಥಿಗಳು: ನೇ ಹಂತದ ಹಂತದ ಚುನಾವಣೆಯಲ್ಲಿ 589 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ಸುಮಾರು 1.1 ಕೋಟಿ ಮತದಾರರು ಈ ಅಭ್ಯರ್ಥಿಗಳ ಹಣೆಬರಹ ಬರೆಯುತ್ತಿದ್ದಾರೆ.

ಇವುಗಳಲ್ಲಿ 3,754 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದೂ, 4,282 ಬೂತ್‌ಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದೂ ಗುರುತಿಸಲಾಗಿದೆ. ಯಡಿಯೂರಪ್ಪ-ಬಂಗಾರಪ್ಪ, ಎಂ.ಪಿ.ಪ್ರಕಾಶ್-ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ-ಅನಿಲ್ ಲಾಡ್, ರಮಾನಾಥ ರೈ-ನಾಗರಾಜ ಶೆಟ್ಟಿ, ಕುಮಾರ ಬಂಗಾರಪ್ಪ-ಮಧು ಬಂಗಾರಪ್ಪ ನಡುವಿನ ಘಟಾನುಘಟಿಗ ಸ್ಪರ್ಧೆ ಅತ್ಯಂತ ಗಮನ ಸೆಳೆದವು.

ಕಳೆದ 2004ರ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಬಿಜೆಪಿ 37 ಸ್ಥಾನಗಳನ್ನು, ಕಾಂಗ್ರೆಸ್ 22 ಹಾಗೂ ಜೆಡಿಎಸ್ 14 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

ಬಿಗಿ ಭದ್ರತೆ: 2ನೇ ಹಂತದ ಚುನಾವಣೆಗಾಗಿ 72 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ನಕ್ಸಲ್ ಚಟುವಟಿಕೆ ಹೆಚ್ಚಾಗಿರುವ ಕರಾವಳಿ, ಮಲೆನಾಡು ಪ್ರದೇಶ ಮತ್ತು ಗಣಿ ಧೂಳಿನಿಂದ ಸೂಕ್ಷ್ಮ ಸ್ವರೂಪ ಪಡೆಯುತ್ತಿರುವ ಬಳ್ಳಾರಿಯಲ್ಲಿ ತೀವ್ರ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಬಳ್ಳಾರಿಯಲ್ಲಿ ಇದುವರೆಗೆ 11 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ನಕ್ಸಲ್ ಪೀಡಿತ ಪ್ರದೇಶಗಳಾದ ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ, ಮಾಸ್ತಿಕಟ್ಟೆ, ಶಿವಮೊಗ್ಗದ ಆಗುಂಬೆ, ಚಿಕ್ಕಮಗಳೂರಿನ ಶೃಂಗೇರಿಗಳಲ್ಲಿ 15,100 ಪ್ಯಾರಾಮಿಲಿಟರಿ ಪಡೆಗಳು ಹಾಗೂ 500 ನಕ್ಸಲ್-ನಿರೋಧಕ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಈ ನಡುವೆ, ಎಲೆಕ್ಟ್ರಾನಿಕ್ ಮಾಧ್ಯಮಗಳು ಚುನಾವಣಾ ಪೂರ್ವ ಮಾಡಿದ ಸಮೀಕ್ಷೆಯನ್ನು ಮತದಾನ ನಡೆಯುವ ಸಮಯದಲ್ಲಿ ಬಿತ್ತರಿಸದಂತೆ ಚುನಾವಣಾ ಆಯೋಗ ನಿಷೇಧಿಸಿದೆ.
ಮತ್ತಷ್ಟು
ಬೆಳಗಾವಿಯಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ
ಬಳ್ಳಾರಿ: ಜನಾರ್ದನ ರೆಡ್ಡಿ ಬಂಧನ, ಬಿಡುಗಡೆ
ಬೆಂಗಳೂರಲ್ಲಿ ಕಾಲರಾ, ಮುಂಜಾಗ್ರತಾ ಕ್ರಮ
ಓಟಿಗೆ ನೋಟು: ಬಳ್ಳಾರಿಯಲ್ಲಿ 8 ಸೆರೆ, ನಾಲ್ಕು ವಾಹನ ವಶ
ನಮಗೇ ಬಹುಮತ: 4 ಸಮೀಕ್ಷೆಯಿದೆ ಎಂದ ಮೊಯಿಲಿ
ಜೈಪುರ ಸ್ಪೋಟ:ರಾಜ್ಯದಾದ್ಯಂತ ಕಟ್ಟೆಚ್ಚರ