ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಪರ ಅಧಿಕಾರಿ ಮತಯಾಚನೆ  Search similar articles
ಚಿತ್ರದುರ್ಗದ ಕವಾಡಿಗರ ಹಟ್ಟಿ ಗ್ರಾಮದಲ್ಲಿ ಮತಗಟ್ಟೆ ಅಧಿಕಾರಿ ಜಯಣ್ಣ ಕಾಂಗ್ರೆಸ್ ಪರ ಮತಚಲಾಯಿಸುವಂತೆ ಮತದಾರರಿಗೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ಘಟನೆಯಿಂದ ಆಕ್ರೊಶಗೊಂಡಿರುವ ಮತದಾರರು ಮತಗಟ್ಟೆ ಅಧಿಕಾರಿಯನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.

ಎರಡನೇ ಹಂತದ ಚುನಾವಣೆಗೆ ಮತದಾರರು ಸರದಿ ಸಾಲಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಬಂದಂತಹ ಸಂದರ್ಭದಲ್ಲಿ ಕೊನೆಯ ಕ್ಷಣದ ಪ್ರಚಾರ ಎಂಬಂತೆ ಮತಗಟ್ಟೆಯ ಅಧಿಕಾರಿಗಳೇ ಈ ಅಭ್ಯರ್ಥಿಗೆ ಮತ ಹಾಕಿ ಎಂದು ಮತದಾರರಿಗೆ ಒತ್ತಾಯ ಹೇರಿದ ಘಟನೆ ಇಂದು ಸಂಭವಿಸಿದೆ.

ಈ ಹಿನ್ನೆಲೆಯಲ್ಲಿ ಮತಗಟ್ಟೆ ಪ್ರದೇಶದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿದ್ದು, ಸಾರ್ವಜನಿಕರು ಪ್ರತಿಭಟನೆಗೆ ಇಳಿದಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಬೆಳಿಗ್ಗೆ 11 ಗಂಟೆಯ ವೇಳೆಗೆ ಶೇ.16.5 ರಷ್ಟು ಮತದಾನವಾಗಿರುವ ವರದಿ ಬಂದಿದೆ
ಮತ್ತಷ್ಟು
ಶ್ರೀರಾಮುಲುಗೆ ಜಾಮೀನು, ಬಳ್ಳಾರಿ ಎಸ್ಪಿ ಅಮಾನತು
ಕರ್ನಾಟಕ ಮತ ಸಮರ-II: ಮತದಾನ ಆರಂಭ
ಬೆಳಗಾವಿಯಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ
ಬಳ್ಳಾರಿ: ಜನಾರ್ದನ ರೆಡ್ಡಿ ಬಂಧನ, ಬಿಡುಗಡೆ
ಬೆಂಗಳೂರಲ್ಲಿ ಕಾಲರಾ, ಮುಂಜಾಗ್ರತಾ ಕ್ರಮ
ಓಟಿಗೆ ನೋಟು: ಬಳ್ಳಾರಿಯಲ್ಲಿ 8 ಸೆರೆ, ನಾಲ್ಕು ವಾಹನ ವಶ