ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲ್ ರಾಜಕೀಯ: ಹೆಬ್ರಿ ಬಳಿ ಇಬ್ಬರು ನಾಗರಿಕರ ಹತ್ಯೆ  Search similar articles
ಚುನಾವಣೆಗೆ ಮುನ್ನಾ ದಿನ ರಾತ್ರಿ ನಕ್ಸಲರು ದಾಂಧಲೆ ಎಬ್ಬಿಸಿದ್ದು, ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ನಕ್ಸಲರು ಗುರುವಾರ ರಾತ್ರಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ನಕ್ಸಲರ ಗುಂಡಿಗೆ ಬಲಿಯಾದವರನ್ನು ಶಿಕ್ಷಕ ಭೋಜ ಶೆಟ್ಟಿ ಮತ್ತು ಕೃಷಿಕ ಸುರೇಶ್ ಶೆಟ್ಟಿ ಎಂದು ಗುರುತಿಸಲಾಗಿದ್ದು, ಪರಿಸರದ ಜನ ಆತಂಕಗೊಂಡಿದ್ದಾರೆ.

ಕಾರ್ಕಳ ಕ್ಷೇತ್ರದಲ್ಲಿ ಮತದಾನದಲ್ಲಿ ಭಾಗವಹಿಸದಂತೆ ನಕ್ಸಲರು ಎಚ್ಚರಿಕೆ ನೀಡಿದ್ದರೂ ಕೂಡ ಕಾಂಗ್ರೆಸ್ ಬೆಂಬಲಿಸಲು ಪರೋಕ್ಷವಾಗಿ ಸೂಚನೆ ನೀಡಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷವು ನಕ್ಸಲರನ್ನು ಬೆಂಬಲಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.

ಗುರುವಾರ ರಾತ್ರಿ ಭೋಜ ಶೆಟ್ಟಿ ಅವರ ಮನೆಯ ಬಾಗಿಲನ್ನು ಯಾರೋ ಅಪರಿಚಿತರು ಬಡಿದದ್ದನ್ನು ಗಮನಿಸಿ, ಮನೆಯೊಳಗಿಂದ ಬಂದು ಬಾಗಿಲು ತೆರೆದು ಹೊರಬಂದಾಗ, ಮರೆಯಲ್ಲಿಯೇ ಅಡಗಿ ಕುಳಿತಿದ್ದ ಶಂಕಿತ ನಕ್ಸಲೀಯರು ಗುಂಡು ಹೊಡೆದಿದ್ದರು. ಅಲ್ಲದೇ ನೆರೆಮನೆಯ ಸುರೇಶ್ ಶೆಟ್ಟಿ ಅವರಿಗೂ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆ ಉಸಿರೆಳೆದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿಯ ಬೆಂಬಲಿಗರಾಗಿದ್ದ ಭೋಜಶೆಟ್ಟಿ ಅವರ ಮನೆಗೆ ಎರಡು ವರ್ಷಗಳ ಹಿಂದೆಯೇ ನಕ್ಸಲರು ದಾಳಿ ನಡೆಸಿದ್ದರು, ಆ ಸಂದರ್ಭದಲ್ಲಿ ಅವರೂ ಕೋವಿ ತೋರಿಸಿ ನಕ್ಸಲರನ್ನು ಹಿಮ್ಮೆಟ್ಟಿಸಿದ್ದರು. ಹೆಬ್ರಿಯ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ವಿಕ್ರಂ ಗೌಡ ನೇತೃತ್ವದ ತಂಡ ಈ ದುಷ್ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮತ್ತಷ್ಟು
ಕಾಂಗ್ರೆಸ್ ಪರ ಅಧಿಕಾರಿ ಮತಯಾಚನೆ
ಶ್ರೀರಾಮುಲುಗೆ ಜಾಮೀನು, ಬಳ್ಳಾರಿ ಎಸ್ಪಿ ಅಮಾನತು
ಕರ್ನಾಟಕ ಮತ ಸಮರ-II: ಮತದಾನ ಆರಂಭ
ಬೆಳಗಾವಿಯಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ
ಬಳ್ಳಾರಿ: ಜನಾರ್ದನ ರೆಡ್ಡಿ ಬಂಧನ, ಬಿಡುಗಡೆ
ಬೆಂಗಳೂರಲ್ಲಿ ಕಾಲರಾ, ಮುಂಜಾಗ್ರತಾ ಕ್ರಮ