ಹತ್ತು ಜಿಲ್ಲೆಗಳಲ್ಲಿ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ. 67.8ರಷ್ಟು ಮತದಾನವಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಇಂದು (ಶನಿವಾರ) ಚುನಾವಣೆ ಕುರಿತು ವಿವರಣೆ ನೀಡಿದ ಅವರು, ಎರಡನೇ ಹಂತದ ಚುನಾವಣೆಯಲ್ಲಿ ಮತ ಚಲಾವಣೆಯಲ್ಲಿ ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಶೇ. 75.63ರಷ್ಟು ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಶೇ.72.87 ಮತದಾನವಾಗಿದೆ ಎಂದು ತಿಳಿಸಿದರು.
ಮೊದಲ ಹಂತದ ಚುನಾವಣೆಯಲ್ಲಿ ನೀರಸ ಮತದಾನವಾಗಿತ್ತು. ಆದರೆ ಎರಡನೇ ಹಂತದ ಮತದಾನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಉಳಿದಂತೆ ಶಾಂತಿಯುತ ಮತದಾನವಾಗಿದೆ ಎಂದು ಅವರು ತಿಳಿಸಿದರು.
10 ಜಿಲ್ಲೆಗಳ ಶೇಕಡವಾರು ಫಲಿತಾಂಶ ಇಂತಿವೆ: ಉಡುಪಿ - 75.63 ದಕ್ಷಿಣ ಕನ್ನಡ - 72.87 ಚಿಕ್ಕಮಗಳೂರು - 71.14 ದಾವಣಗೆರೆ - 70.84 ಉತ್ತರ ಕನ್ನಡ - 69 ಶಿವಮೊಗ್ಗ - 70.06 ಚಿತ್ರದುರ್ಗ - 67.83 ಬಳ್ಳಾರಿ - 66.64 ರಾಯಚೂರು - 54.01 ಕೊಪ್ಪಳ - 62.39
|