ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂ. ರಾ.ವಿ. ನಿಲ್ದಾಣಕ್ಕೆ ಕೆಂಪೆಗೌಡ ಹೆಸರು: ಆಗ್ರಹ  Search similar articles
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೆಗೌಡ ಅವರ ಹೆಸರನ್ನು ಇಡಬೇಕೆಂದು ಪಟ್ಟು ಹಿಡಿದಿರುವ ಕರ್ನಾಟಕ ರಕ್ಷಣಾ ವೇದಿಕೆ, ಅದುವರೆಗೆ ನಿಲ್ದಾಣ ಉದ್ಘಾಟನೆಗೆ ಅವಕಾಶ ನೀಡದಿರಲು ನಿರ್ಧರಿಸಿದೆ.

ಈ ಕುರಿತಂತೆ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಾಗಿದೆ.

ಸಭೆಯ ಬಳಿಕ ಮಾತನಾಡಿದ ನಾರಾಯಣ ಗೌಡ, ರಾಜ್ಯದಲ್ಲಿ ಪ್ರತಿನಿಧಿ ಇಲ್ಲದ ವೇಳೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೊಳ್ಳುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ತಮ್ಮ ಬೇಡಿಕೆಗಳಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಂದಿಸುವವರೆಗೆ ನಿಲ್ದಾಣ ಕಾರ್ಯಾರಂಭಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ನಿಲ್ದಾಣಕ್ಕಾಗಿ ಭೂಮಿ ನೀಡಿದ ಮೂರು ಸಾವಿರ ಕುಟುಂಬಗಳ ತಲಾ ಒಬ್ಬರಿಗೆ ಉದ್ಯೋಗ, ಕನ್ನಡದಲ್ಲಿ ನಾಮಫಲಕ, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದ ಟ್ಯಾಕ್ಸಿ ಚಾಲಕರನ್ನೇ ಇಲ್ಲಿಗೂ ಮುಂದುವರೆಸುವುದು ಸೇರಿದಂತೆ ಒಟ್ಟು ನಾಲ್ಕು ಬೇಡಿಕೆಗಳಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಒಪ್ಪದಿದ್ದರೆ ಉಗ್ರ ಪ್ರತಿಭಟನೆಗೆ ಇಳಿಯುವುದಾಗಿ ಅವರು ಎಚ್ಚರಿಕೆ ನೀಡಿದರು.
ಮತ್ತಷ್ಟು
ಎರಡನೇ ಹಂತದ ಚುನಾವಣೆ: ಶೇ.67.8 ಮತದಾನ
ರಾಷ್ಟ್ರ ಅಭಿವೃದ್ದಿಗೆ ಕಾಂಗ್ರೆಸ್ ಪಣ: ಸೋನಿಯಾ
ಯಡಿಯೂರಪ್ಪ ಕನಸು ನನಸಾಗಲ್ಲ:ಪೂಜಾರಿ
'ಸೋತರೂ, ಗೆದ್ದರೂ ಯಡಿಯೂರಪ್ಪ ಮುಖ್ಯಮಂತ್ರಿ'
ಸೋನಿಯಾ,ರಾಜನಾಥ್ ರಾಜಕೀಯ ಕಸರತ್ತು
ರಾಜ್ಯದಲ್ಲಿ ಅತಂತ್ರ ವಿಧಾನ ಸಭೆ: ಬಂಗಾರಪ್ಪ