ಕಳಸಾ-ಬಂಡೂರಿ ಯೋಜನೆಗೆ ತಾನು ಅಡ್ಡಿಪಡಿಸಿದ್ದೇ ಎಂದು ಬಿಜೆಪಿ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಇಂದು(ಭಾನುವಾರ) ಬೆಳಿಗ್ಗೆ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆಗೆ ತಾನು ಯಾವತ್ತೂ ಅಡ್ಡಿ ಪಡಿಸಿಲ್ಲ. ಈ ಬಗ್ಗೆ ಆರೋಪ ಪಡಿಸುತ್ತಿರುವ ಬಿಜೆಪಿ ಜೊತೆ ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಲು ಸಿದ್ದವಿದ್ದೇನೆ ಎಂದು ತಿಳಿಸಿದರು.
ಇಂದು ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚಲು ಪ್ರಮುಖ ಕಾರಣ ಬಿಜೆಪಿ ಎಂದು ಗಂಭೀರ ಆರೋಪ ಮಾಡಿದ ಅವರು, ಸಮಾಜವನ್ನು ಒಡೆಯುತ್ತಿರುವುದೇ ಬಿಜೆಪಿಯ ಪ್ರಮುಖ ಸಾಧನೆ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಸಾಧನೆಗಳ ಕುರಿತು ತಿಳಿಸಿದ ಅವರು, ಪಕ್ಷ ಅಧಿಕಾರಕ್ಕೆ ಬಂದರೆ ಸಿಇಟಿ ರದ್ದುಗೊಳಿಸಲಾಗುವುದು. ಆಶ್ರಯ, ಜನತಾ ಮನೆಗಳಿಗೆ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದರು.
|