ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಲಾರ: ಕಳ್ಳಭಟ್ಟಿ ಸೇವಿಸಿ 18 ಸಾವು  Search similar articles
ಕೋಲಾರದ ಎರಡು ಪ್ರತ್ಯೇಕ ಘಟನೆಗಳಲ್ಲಿ ಕಳ್ಳಭಟ್ಟಿ ಕುಡಿದು 18 ಮಂದಿ ಸಾವನ್ನಪ್ಪಿದ್ದು, 12 ಮಂದಿ ತೀವ್ರ ಅಸ್ವಸ್ಥಗೊಂಡಿದ್ದಾರೆ.

ಕೋಲಾರದ ಟೇಕಲ್ ಹಾಗೂ ನರಸಾಪುರ ಗ್ರಾಮದಲ್ಲಿ ಕಳ್ಳಭಟ್ಟಿ ಸೇವನೆಯಿಂದ ಈ ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಳ್ಳಭಟ್ಟಿ ಕೇಂದ್ರಗಳ ಮೇಲೆ ದಾಳಿ ನಡೆಸುವಂತೆ ಜಿಲ್ಲಾ ಐಜಿಪಿ ಹಾಗೂ ಎಸ್.ಪಿ.ಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶ್ರೀ ಕುಮಾರ್ ಸೂಚಿಸಿದ್ದಾರೆ.

ಈ ಘಟನೆಯಿಂದ ಆಕ್ರೌಶಗೊಂಡಿರುವ ನಾಗರಿಕರು, ಪ್ರತಿಭಟನೆಗೆ ಮುಂದಾಗಿದ್ದಾರೆ. ಮೃತಪಟ್ಟ ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ನೀಡಬೇಕು ಹಾಗೂ ತಪ್ಪಿಸ್ಥರನ್ನು ಬಂಧಿಸಬೇಕೆಂದು ಆಗ್ರಹಿಸಿ ರಸ್ತೆ ತಡೆ ನಡೆಸಿದ್ದಾರೆ.

ಈ ಸಂಬಂಧ ಪೊಲೀಸರು ನಾಲ್ಕು ಜನರನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ಆರೋಪಿ ಮೃತ ಮಂಜುನಾಥ್ ಎಂಬುವವರೇ ಈ ಕಳ್ಳಭಟ್ಟಿ ಸರಬರಾಜು ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಮತ್ತಷ್ಟು
ಸುಖಾಂತ್ಯ ಕಂಡ ನಯೀನ್ ಅಪಹರಣ
ಬಿಜೆಪಿ ಪರ ಅಡ್ವಾಣಿ, ಮೋದಿ, ಕಾಂಗ್ರೆಸ್ ಪರ ರಾಹುಲ್
ಕಳಸಾ ಯೋಜನೆಗೆ ಅಡ್ಡಿಪಡಿಸಿಲ್ಲ: ಕುಮಾರ ಸ್ವಾಮಿ
ಚುನಾವಣಾ ಕಣದಲ್ಲಿ 36 ಅಪರಾಧಿಗಳು
ಅಂ. ರಾ.ವಿ. ನಿಲ್ದಾಣಕ್ಕೆ ಕೆಂಪೆಗೌಡ ಹೆಸರು: ಆಗ್ರಹ
ಎರಡನೇ ಹಂತದ ಚುನಾವಣೆ: ಶೇ.67.8 ಮತದಾನ