ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಲಾರ ಕಳ್ಳಭಟ್ಟಿಗೆ 28 ಬಲಿ 35 ಅಸ್ವಸ್ಥ  Search similar articles
ಬೆಂಗಳೂರಿನ ಹಾಗೂ ಕೋಲಾರದ ಎರಡು ಪ್ರದೇಶಗಳಲ್ಲಿ ಕಳ್ಳಭಟ್ಟಿ ಕುಡಿದು 54 ಮಂದಿ ಸಾವನ್ನಪ್ಪಿದ್ದು, ಹಲವಾರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಆಸ್ಪತ್ರೆಗೆ ದಾಖಲಾದವರ ಪೈಕಿ 36 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಅಂಬೇಡ್ಕರ್ ಕಾಲೇಜು ಬಳಿ ಇರುವ ಮೋದಿ ನಗರದ ಕೊಳೆಗೇರಿ ಹಾಗೂ ರೋಷನ್ ನಗರದಲ್ಲಿ ಕಳ್ಳಭಟ್ಟಿ ಸೇವಿಸಿ ಒರ್ವ ಮಹಿಳೆ ಸೇರಿದಂತೆ ಒಟ್ಟು 13ಮಂದಿ ಬಲಿಯಾಗಿದ್ದಾರೆ. ಈಗಾಗಲೇ ಅಸ್ವಸ್ಥಗೊಂಡವರನ್ನು ನಗರದ ಅಂಬೇಡ್ಕರ್ ಹಾಗೂ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಕಳ್ಳಭಟ್ಟಿ ಸರಬರಾಜು ಮಾಡುತ್ತಿದ್ದವರ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಕೋಲಾರದಲ್ಲಿನ ಟೇಕಲ್ ಹಾಗೂ ನರಸಾಪುರದಲ್ಲಿ ಕಳ್ಳಭಟ್ಟಿ ಸೇವಿಸಿ ಇದುವರೆಗೆ ಒಟ್ಟು 15 ಮಂದಿ ಪ್ರಾಣಕಳೆದುಕೊಂಡಿದ್ದು, ತೀವ್ರ ಅಸ್ವಸ್ಥಗೊಂಡಿರುವ 15ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರದಲ್ಲಿ ಕಳ್ಳಭಟ್ಟಿ ಸರಬರಾಜು ಮಾಡುತ್ತಿದ್ದ ಮಂಜುನಾಥ್ ಎಂಬುವವನು ಕಳ್ಳಭಟ್ಟಿ ಕುಡಿದು ಮೃತಪಟ್ಟಿದ್ದಾನೆ.

ಚುನಾವಣಾ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡಲಾಗಿದೆ ಎಂದು ತಿಳಿದು ಬಂದಿತ್ತಾದರೂ, ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಾರಾಯಿ ನಿಷೇಧ ಜಾರಿ ಮಾಡಿದ ದಿನದಿಂದ ಅಕ್ರಮವಾಗಿ ಕಳ್ಳಭಟ್ಟಿ ಮಾರಾಟ ಪ್ರಾರಂಭವಾಗಿತ್ತು. ಈ ಬಗ್ಗೆ ಪೊಲೀಸರಿಗೆ ಅನೇಕ ಬಾರಿ ದೂರು ದಾಖಲಿಸಿದ್ದರೂ, ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ. ಈ ಸಂಬಂಧ ಕೋಲಾರದಲ್ಲಿ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಬಿಜಾಪುರದಲ್ಲಿ ಅಬಕಾರಿ ದಾಳಿ
ಈ ಮಧ್ಯೆ ಬಿಜಾಪುರದ ಕಾಕಟನೂರಿನಲ್ಲಿ ಅಬಕಾರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 35ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಿದ್ದು, ಒಂದು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮತ್ತಷ್ಟು
ಕೋಲಾರ: ಕಳ್ಳಭಟ್ಟಿ ಸೇವಿಸಿ 18 ಸಾವು
ಸುಖಾಂತ್ಯ ಕಂಡ ನಯೀನ್ ಅಪಹರಣ
ಬಿಜೆಪಿ ಪರ ಅಡ್ವಾಣಿ, ಮೋದಿ, ಕಾಂಗ್ರೆಸ್ ಪರ ರಾಹುಲ್
ಕಳಸಾ ಯೋಜನೆಗೆ ಅಡ್ಡಿಪಡಿಸಿಲ್ಲ: ಕುಮಾರ ಸ್ವಾಮಿ
ಚುನಾವಣಾ ಕಣದಲ್ಲಿ 36 ಅಪರಾಧಿಗಳು
ಅಂ. ರಾ.ವಿ. ನಿಲ್ದಾಣಕ್ಕೆ ಕೆಂಪೆಗೌಡ ಹೆಸರು: ಆಗ್ರಹ