ಕನ್ನಡದ ಹಿರಿಯ ಸಾಹಿತಿ, ನಿರ್ದೇಶಕ ಆರ್.ಎನ್. ಜಯಗೋಪಾಲ್ ಚೆನ್ನೈನ ತಮ್ಮ ಸ್ವಗೃಹದಲ್ಲಿ ಸೋಮವಾರ ನಿಧನ ಹೊಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಆರ್.ಎನ್.ಜೆ ನಿಧನದಿಂದ ಸಾಹಿತ್ಯ ಲೋಕದ ದೊಡ್ಡ ವೃಕ್ಷವೇ ಕಳಚಿದಂತಾಗಿದೆ. ಸುಮಾರು 12 ಸಾವಿರಕ್ಕೂ ಹೆಚ್ಚು ಸಂಗೀತ ಸಂಯೋಜಿಸಿರುವ ಆರ್.ಎನ್.ಜೆ. ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.
ಹಳೆ ಹಾಗೂ ಹೊಸ ಚಿತ್ರರಂಗಕ್ಕೆ ಕೊಂಡಿಯಂತಿದ್ದ ಆರ್.ಎನ್.ಜೆ. ಹಾಡುಗಳು ಇಂದು ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇತ್ತೀಚೆಗೆ ರಾಮಾಯಣ ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಆರ್.ಎನ್.ಜೆ ಹೊಸ ಮೈಲುಗಲ್ಲನ್ನು ಸ್ಥಾಪಿಸಿದ್ದರು. ಇವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. ತಾರತಮ್ಯವಿಲ್ಲದೆ ತಮ್ಮ ಸರಳತೆಯಿಂದ ಹೆಸರುವಾಸಿಯಾಗಿದ್ದ ಆರ್.ಎನ್.ಜೆ. ಕುರಿತು ಮಾತನಾಡಲು ಪದಗಳೇ ಇಲ್ಲ ಎಂದು ಸಾಹಿತಿ ಕೆ. ಕಲ್ಯಾಣ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
|