ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನರಿಂದ ಕಾಂಗ್ರೆಸ್ ತಿರಸ್ಕೃತ: ಆಡ್ವಾಣಿ  Search similar articles
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದ್ದು, ಇದಕ್ಕೆ ಕರ್ನಾಟಕ ಚುನಾವಣೆಯೇ ಸಾಕ್ಷಿಯಾಗಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಪ್ರತಿಪಕ್ಷ ನಾಯಕ ಎಲ್.ಕೆ. ಅಡ್ವಾಣಿ ತಿಳಿಸಿದ್ದಾರೆ.

ಇಂದು (ಸೋಮವಾರ) ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರ ಚುನಾವಣೆ ಬಳಿಕ ದೇಶದಲ್ಲೆಡೆ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ. ಕರ್ನಾಟಕ ಚುನಾವಣೆಯು 2009ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಈ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಬಿಜೆಪಿ ಲೋತಸಭೆಯನ್ನು ಪ್ರವೇಶಿಸಸಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಬೆಲೆ ಏರಿಕೆ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ, ಹಣದುಬ್ಬರದಿಂದಾಗಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿರುವ ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಒಲೈಕೆಗಾಗಿ ಭಯೋತ್ಪಾದಕತೆ ವಿಷಯದಲ್ಲಿ ಯುಪಿಎ ಸರ್ಕಾರ ರಾಜಿ ಮಾಡಿಕೊಂಡಿದೆ. ಇದರಿಂದ ದೇಶದಲ್ಲಿ ಭಯೋತ್ಪಾದಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಆರೋಪಿಸಿದ ಅವರು, ದೇಶ ಅಭಿವೃದ್ದಿ ಕಾಣಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಮತ್ತಷ್ಟು
ಆರ್.ಎನ್. ಜಯಗೋಪಾಲ್ ವಿಧಿವಶ
ಭಯೋತ್ಪಾದನೆಗೆ ಶರಣಾಗಿದ್ದ ಬಿಜೆಪಿ :ರಾಹುಲ್
ಕೋಲಾರ ಕಳ್ಳಭಟ್ಟಿಗೆ 28 ಬಲಿ 35 ಅಸ್ವಸ್ಥ
ಕೋಲಾರ: ಕಳ್ಳಭಟ್ಟಿ ಸೇವಿಸಿ 18 ಸಾವು
ಸುಖಾಂತ್ಯ ಕಂಡ ನಯೀನ್ ಅಪಹರಣ
ಬಿಜೆಪಿ ಪರ ಅಡ್ವಾಣಿ, ಮೋದಿ, ಕಾಂಗ್ರೆಸ್ ಪರ ರಾಹುಲ್