ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮರಕ್ಕೆ ಜೀಪ್ ಡಿಕ್ಕಿ: ಆರು ಸಾವು  Search similar articles
ಜೀಪೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಆರು ಜನ ಮೃತಪಟ್ಟಿರುವ ಘಟನೆ ಸುಬ್ರಮಣ್ಯ ಬಳಿ ಇಂದು(ಮಂಗಳವಾರ) ಮಧ್ಯಾಹ್ನ ಸಂಭವಿಸಿದೆ.

ಇಂದು ಮಧ್ಯಾಹ್ನ ಸುಮಾರು 3ಗಂಟೆಗೆ ಸಂಭವಿಸಿದ ಈ ಭೀಕರ ಅಪಘಾತದಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರೆಲ್ಲಾ ಬೆಳ್ತಂಗಡಿಯ ಕೊಕ್ಕಡ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ.

ಸುಬ್ರಮಣ್ಯ ದೇವಸ್ಥಾನದಿಂದ ವಾಪಸ್ಸಾಗುತ್ತಿದ್ದಾಗ ಸುಬ್ರಮಣ್ಯದ ಉದನೆ ಬಳಿಯ ರೆಂಜಾಳದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಚಾಲಕನ ಬೇಜವಾಬ್ದಾರಿಯಿಂದ ಹಾಗೂ ಅತೀ ವೇಗವಾಗಿ ವಾಹನವನ್ನು ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.
ಮತ್ತಷ್ಟು
ಕೋಲಾರ: ಕಳ್ಳಭಟ್ಟಿಗೆ ನೂರು ಬಲಿ
ನೀತಿ ಸಂಹಿತೆ ಉಲ್ಲಂಘನೆ: ಯಡಿಯೂರಪ್ಪ ವಿರುದ್ಧ ದೂರು
ಹೈಕಮಾಂಡ್ ಸೂಚಿದರೆ ಪುನಃ ಸಿಎಂ: ಕೃಷ್ಣ
ಬಹಿರಂಗ ಪ್ರಚಾರಕ್ಕೆ ಮಂಗಳವಾರ ಅಂತ್ಯ
ಕಳ್ಳಭಟ್ಟಿ ಪ್ರಕರಣ:ಸತ್ತವರ ಸಂಖ್ಯೆ 54ಕ್ಕೆ
ಜನರಿಂದ ಕಾಂಗ್ರೆಸ್ ತಿರಸ್ಕೃತ: ಆಡ್ವಾಣಿ