ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಳ್ಳಭಟ್ಟಿ ದುರಂತ:ಆನೇಕಲ್‌ಲ್ಲಿ 11ಜನರ ಬಂಧನ  Search similar articles
ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ತಮಿಳುನಾಡಿನ ಹೊಸುರಗಳಲ್ಲಿ ಕಳ್ಳಭಟ್ಟಿ ಕುಡಿದು ಸತ್ತವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪೊಲೀಸರು 11 ಜನರನ್ನು ಆನೇಕಲ್‌ನಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಇದುವರೆಗೆ ರಾಜ್ಯಾದ್ಯಂತ ಕಳ್ಳಭಟ್ಟಿ ದುರಂತದಿಂದ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಸಾಗಿದೆ. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಕಳ್ಳಭಟ್ಟಿ ದುರಂತಕ್ಕೆ ಮಿಥೈಲ್ ಬಳಕೆಯೇ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

ಕಾರ್ಖಾನೆಗಳಲ್ಲಿ ಉಪಯೋಗಿಸುವ ಮಿಥೈಲ್‌ಗೆ ನೀರನ್ನು ಸೇರಿಸಿ ಕಳ್ಳಭಟ್ಟಿಯನ್ನು ತಯಾರು ಮಾಡಲಾಗಿತ್ತು. ಇದು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.

ರಾಜ್ಯಾದ್ಯಂತ ನಕಲಿ ಮದ್ಯ ಕುಡಿದು ಸತ್ತವರ ಸಂಖ್ಯೆ 109ಕ್ಕೇರಿದೆ ಆನೇಕಲ್‌ನಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಂಧ 11 ಜನರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ಅತ್ತಿಬೆಲೆ ಹಾಗೂ ಸರ್ಜಾಪುರಗಳಲ್ಲಿ ದಾಳಿ ನಡೆಸಿದ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ತುರ್ತು ಸಭೆ:
ರಾಜ್ಯದಲ್ಲಿ ಕಳ್ಳಭಟ್ಟಿ ದುರಂತದ ಹಿನ್ನೆಲೆಯಲ್ಲಿ ರಾಜ್ಯಪಾಲರ ಸಲಹೆಗಾರರಾದ ತಾರಕನ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸಭೆ ಆಯೋಜಿಸಲಾಗಿತ್ತು. ಮೃತರ ಕುಟುಂಬಕ್ಕೆ 50 ಸಾವಿರ ಪರಿಹಾರವನ್ನು ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ, ಈ ಪ್ರಕರಣದ ಕುರಿತು ತನಿಖೆಯನ್ನು ಸಿಓಡಿಗೆ ಒಪ್ಪಿಸುವ ಕುರಿತು ಸಭೆಯಲ್ಲಿ ಚಿಂತನೆ ನಡೆಸಲಾಗಿದೆ.

ಅಬಕಾರಿ ದಾಳಿ:
ಕಳ್ಳಭಟ್ಟಿ ದುರಂತದಿಂದ ಎಚ್ಚೆತ್ತುಕೊಂಡಿರುವ ಅಬಕಾರಿ ಇಲಾಖೆ ಶಿವಮೊಗ್ಗ, ಹಾಸನ, ಹಾವೇರಿ, ಮಡಿಕೇರಿ ಸೇರಿದಂತೆ ಹಲವು ಕಡೆ ದಾಳಿ ನಡೆಸಿದೆ. ಶಿವಮೊಗ್ಗದ ಹೊರವಲಯದಲ್ಲಿ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಸುಮಾರು 60 ಸಾವಿರದಷ್ಟು ಮದ್ಯದ ಕೊಳೆಯನ್ನು ನಾಶ ಮಾಡಿದ್ದಾರೆ. ಅಲ್ಲದೆ, ಹಾಸನದಲ್ಲಿ 13 ಸಾವಿರಕ್ಕೂ ಹೆಚ್ಚಿನ ಸಾರಾಯಿ ಪ್ಯಾಕೆಟ್‌ಗಳನ್ನು ನಾಶ ಮಾಡಲಾಗಿದ್ದು, ಇದರ ಮೌಲ್ಯ ಸುಮಾರು 3 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಹಾಗೆಯೇ ಬಿಜಾಪುರದ ಸಿಂದಗಿಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚಿನ ನಕಲಿ ಮದ್ಯವನ್ನು ವಶಪಡಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಮತ್ತಷ್ಟು
ಮರಕ್ಕೆ ಜೀಪ್ ಡಿಕ್ಕಿ: ಆರು ಸಾವು
ಕೋಲಾರ: ಕಳ್ಳಭಟ್ಟಿಗೆ ನೂರು ಬಲಿ
ನೀತಿ ಸಂಹಿತೆ ಉಲ್ಲಂಘನೆ: ಯಡಿಯೂರಪ್ಪ ವಿರುದ್ಧ ದೂರು
ಹೈಕಮಾಂಡ್ ಸೂಚಿದರೆ ಪುನಃ ಸಿಎಂ: ಕೃಷ್ಣ
ಬಹಿರಂಗ ಪ್ರಚಾರಕ್ಕೆ ಮಂಗಳವಾರ ಅಂತ್ಯ
ಕಳ್ಳಭಟ್ಟಿ ಪ್ರಕರಣ:ಸತ್ತವರ ಸಂಖ್ಯೆ 54ಕ್ಕೆ