ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೌಡರನ್ನು ಪ್ರಧಾನಿ ಮಾಡಿದ್ದು ನಾನೇ: ಲಾಲೂ  Search similar articles
ದೇವೇಗೌಡರನ್ನು ದೇಶದ ಪ್ರಧಾನಿ ಹುದ್ದೇಯಲ್ಲಿ ಕುಳ್ಳಿರಿಸಿದ್ದು ನಾನೇ ಎಂದು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು(ಮಂಗಳವಾರ) ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿದ ಅವರು ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ಉನ್ನತ ಪದವಿಯಾದ ಪ್ರಧಾನಿ ಹುದ್ದೆ ಗೌಡರಿಗೆ ನೀಡಿದ್ದೇವೆ. ಆದರೆ ಗೌಡರದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಜಾತ್ಯಾತೀತ ಪಕ್ಷವನ್ನು ಹುಟ್ಟುಹಾಕಿದ ರಾಮಕೃಷ್ಣ ಹೆಗಡೆಯವರನ್ನು ಉಚ್ಛಾಟಿಸುವ ಮೂಲಕ ದೇವೇಗೌಡರು ದೊಡ್ಡ ತಪ್ಪು ಎಸಗಿದ್ದಾರೆ. ಬಳಿಕ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿದರು ಎಂದು ಅವರು ಆರೋಪಿಸಿದರು.

ಬಿಜೆಪಿ ವಿರುದ್ಧ ಕೂಡ ಹಾರಿಹಾಯ್ದ ಅವರು, ಕೋಮುದಳ್ಳುರಿಗೆ ಕಾರಣವಾಗಿರುವ ಎಲ್.ಕೆ. ಅಡ್ವಾಣಿಯವರು ಪ್ರಧಾನಿಯಾಗುವುದು ಕನಸಿನ ಮಾತು. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿಯ ಸಮ್ಮಿಶ್ರ ಸರ್ಕಾರದಿಂದ ಜನತೆಗೆ ದ್ರೋಹವಾಗಿದೆ. ಈ ನಿಟ್ಟಿನಲ್ಲಿ ಸ್ಥಿರ ಸರ್ಕಾರಕ್ಕಾಗಿ ಕಾಂಗ್ರೆಸ್‌ನ್ನು ಜನತೆ ಗೆಲ್ಲಿಸಬೇಕಾಗಿದೆ ಎಂದು ಮತದಾರರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತಹಾಕುವಂತೆ ಮನವಿ ಮಾಡಿದರು.
ಮತ್ತಷ್ಟು
ಕಳ್ಳಭಟ್ಟಿ ದುರಂತ:ಆನೇಕಲ್‌ಲ್ಲಿ 11ಜನರ ಬಂಧನ
ಮರಕ್ಕೆ ಜೀಪ್ ಡಿಕ್ಕಿ: ಆರು ಸಾವು
ಕೋಲಾರ: ಕಳ್ಳಭಟ್ಟಿಗೆ ನೂರು ಬಲಿ
ನೀತಿ ಸಂಹಿತೆ ಉಲ್ಲಂಘನೆ: ಯಡಿಯೂರಪ್ಪ ವಿರುದ್ಧ ದೂರು
ಹೈಕಮಾಂಡ್ ಸೂಚಿದರೆ ಪುನಃ ಸಿಎಂ: ಕೃಷ್ಣ
ಬಹಿರಂಗ ಪ್ರಚಾರಕ್ಕೆ ಮಂಗಳವಾರ ಅಂತ್ಯ