ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೂತನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು: ಕರವೇ  Search similar articles
ದೇವನಹಳ್ಳಿಯ ನೂತನ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೆಗೌಡ ಅವರ ಹೆಸರಿಡುವಂತೆ ಆಗ್ರಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಪ್ರತಿಭಟನೆಗೆ ಮುಂದಾಗಿದೆ.

ನೂತನ ವಿಮಾನ ನಿಲ್ದಾನವು ಇದೇ ತಿಂಗಳ 22ರಂದು ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಕರವೇ ಕಾರ್ಯಕರ್ತರು ನಡೆಸಲು ಉದ್ದೇಶಿಸಿರುವ ರ್ಯಾಲಿಗೆ ಹೆಚ್ಚಿನ ಮಹತ್ವ ಬಂದಿದೆ. ವಿಮಾನ ನಿಲ್ದಾಣ ಉದ್ಘಾಟನೆಗೊಂಡ 48 ಗಂಟೆಗಳಲ್ಲಿ ಕೆಂಪೆಗೌಡರ ಹೆಸರನ್ನು ನಾಮಕರಣ ಮಾಡದಿದ್ದರೆ ಏರ್ ರ್ಪೋರ್ಟ್ ಧ್ವಂಸ ಮಾಡುವುದಾಗಿ ಕರವೇ ಎಚ್ಚರಿಸಿದೆ.

ಈ ಮಧ್ಯೆ ಕರವೇ ಕಾರ್ಯಕರ್ತರ ಹೋರಾಟಕ್ಕೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಹಲವಾರು ಕನ್ನಡ ಸಂಘಟನೆಗಳು ಹೋರಾಟಕ್ಕೆ ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ವಿಮಾನ ನಿಲ್ದಾಣಕ್ಕೆ ಕೆಂಪೆಗೌಡರ ಹೆಸರಿಡುವಂತೆ ಹಲವು ಬಾರಿ ಮನವಿ ಮಾಡುತ್ತಾ ಬಂದಿದ್ದೇವೆ. ಆದರೆ ನಮ್ಮ ಮನವಿಯನ್ನು ನಿಲ್ದಾಣದ ಪ್ರಾಧಿಕಾರವು ನಿರ್ಲಕ್ಷಿಸಿದೆ. ಈ ಹಿನ್ನೆಲೆಯಲ್ಲಿ ಉಗ್ರ ಹೋರಾಟಕ್ಕೆ ಕರವೇ ಇಳಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು
ಗೌಡರನ್ನು ಪ್ರಧಾನಿ ಮಾಡಿದ್ದು ನಾನೇ: ಲಾಲೂ
ಕಳ್ಳಭಟ್ಟಿ ದುರಂತ:ಆನೇಕಲ್‌ಲ್ಲಿ 11ಜನರ ಬಂಧನ
ಮರಕ್ಕೆ ಜೀಪ್ ಡಿಕ್ಕಿ: ಆರು ಸಾವು
ಕೋಲಾರ: ಕಳ್ಳಭಟ್ಟಿಗೆ ನೂರು ಬಲಿ
ನೀತಿ ಸಂಹಿತೆ ಉಲ್ಲಂಘನೆ: ಯಡಿಯೂರಪ್ಪ ವಿರುದ್ಧ ದೂರು
ಹೈಕಮಾಂಡ್ ಸೂಚಿದರೆ ಪುನಃ ಸಿಎಂ: ಕೃಷ್ಣ