ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಳ್ಳಭಟ್ಟಿ ಮಾರಣ ಹೋಮಕ್ಕೆ 150 ಬಲಿ?  Search similar articles
ಇದುವರೆಗೆ ರಾಜ್ಯಾದ್ಯಂತ ಕಳ್ಳಭಟ್ಟಿ ದುರಂತದಿಂದ ಸಾವಿನ ಸಂಖ್ಯೆ ಗಂಟೆ ಗಂಟೆಗೆ ಏರುತ್ತಿದೆ. ಇದೀಗ ಬಂದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳ್ಳಭಟ್ಟಿ ಸೇವನೆಯಿಂದ ಸುಮಾರು 150 ಮಂದಿ ಸಾವನ್ನಪ್ಪಿರಬಹುದು ಎಂದು ಬಲ್ಲ ಮೂಲಗಳು ವರದಿ ಮಾಡಿವೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 13 ಮಂದಿಯನ್ನು ಬಂಧಿಸಲಾಗಿದ್ದು, ಆರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು ಒಂದರಲ್ಲೇ ಸುಮಾರು 45 ಮಂದಿ ಕಳ್ಳಭಟ್ಟಿ ಸೇವನೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆನೇಕಲ್‌ನಲ್ಲಿ 25, ಹೊಸಕೋಟೆಯಲ್ಲಿ 8, ಕೋಲಾರದಲ್ಲಿ 29 ಹಾಗೂ ಕೃಷ್ಣಗಿರಿಯಲ್ಲಿ 35 ಮಂದಿ ಕಳ್ಳಭಟ್ಟಿ ಕುಡಿದು ಮೃತಪಟ್ಟವರಾಗಿದ್ದಾರೆ. ಅಲ್ಲದೆ, ಕಳ್ಳಭಟ್ಟಿ ಸೇವನೆಯಿಂದ ಅಸ್ವಸ್ಥರಾಗಿರುವ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಆತಂಕ ಎದುರಾಗಿದೆ.

ಈ ಸಂಬಂಧ, ಆನೆಕಲ್ ತಾಲೂಕಿನಲ್ಲಿ 13 ಮಂದಿಯನ್ನು ಬಂಧಿಸಲಾಗಿದೆ. ಮಾತ್ರವಲ್ಲದೆ ಅಬಕಾರಿ ಆಯುಕ್ತರು ಆರು ಅಬಕಾರಿ ಅಧಿಕಾರಿಗಳನ್ನು ಅಮಾನತಿಗೆ ಆದೇಶ ನೀಡಿದ್ದಾರೆ. ಲಕ್ಷ್ಮೀನಾರಾಯಣ, ಶ್ರೀನಿವಾಸ್ ಬೊಕಾರಿ ಹಾಗೆಯೇ ಇನ್ಸ್‌ಪೆಕ್ಟರುಗಳಾದ ಆಶಾ, ರಮಾವಾಣಿ, ಶಂಕರ್ ಪ್ರಸಾದ್‌ರನ್ನು ಅಮಾನತುಗೊಳಿಸುವಂತೆ ಅಬಕಾರಿ ಆಯುಕ್ತರಾದ ಚಿಕ್ಕಮಠ ಆದೇಶ ಹೊರಡಿಸಿದ್ದಾರೆ.

ಈ ಮಧ್ಯೆ ಅನಧಿಕೃತ ಅಂಗಡಿಗಳಿಂದ ಮದ್ಯ ಖರೀದಿ ಮಾಡಬಾರೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅನಧಿಕೃತ ಅಂಗಡಿಗಳ ಬಗ್ಗೆ ಮಾಹಿತಿ ದೊರೆತರೆ ಶೀಘ್ರವೇ ತಿಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತಷ್ಟು
ಆತಂಕವಾದ ಹುಟ್ಟಿದ್ದೆ ಬಿಜೆಪಿಯಿಂದ: ಮೋಯಿಲಿ
ಅಕ್ರಮ ಗಣಿಗಾರಿಕೆಯಲ್ಲಿ ಅನಿಲ್ ಲಾಡ್?
ರಾಜ್ಯಪಾಲರ ರಾಜೀನಾಮೆಗೆ ವಾಟಾಳ್ ಆಗ್ರಹ
ನೂತನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು: ಕರವೇ
ಗೌಡರನ್ನು ಪ್ರಧಾನಿ ಮಾಡಿದ್ದು ನಾನೇ: ಲಾಲೂ
ಕಳ್ಳಭಟ್ಟಿ ದುರಂತ:ಆನೇಕಲ್‌ಲ್ಲಿ 11ಜನರ ಬಂಧನ