ಕೊನೆ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದೆ. ಇದರೊಂದಿಗೆ ರಾಜ್ಯ ವಿಧಾನಸಭಾ ಚುನಾವಣೆಯೂ ಅಂತಿಮ ಘಟಕ್ಕೆ ಬಂದಿದೆ. ಹಲವಾರು ಘಟಾನುಘಟಿಗಳ ಭವಿಷ್ಯ ನಾಳೆ ಮತಪೆಟ್ಟಿಗೆಯಲ್ಲಿ ದಾಖಲಾಗಲಿದೆ.
ಒಟ್ಟು 8 ಜಿಲ್ಲೆಗಳ 69ಕ್ಷೇತ್ರಗಳಲ್ಲಿ ಮೇ 22ರಂದು ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಕಣದಲ್ಲಿ ಅನೇಕ ಮಾಜಿ ಮಂತ್ರಿಗಳು, ಮಾಜಿ ಸಚಿವರು, ಮಾಜಿ ಶಾಸಕರು ಇದ್ದಾರೆ. ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಂಭತ್ತನೇ ಬಾರಿ ಚುನಾವಣಾ ಅಖಾಡಕ್ಕಿಳಿಯುವ ಮೂಲಕ ದಾಖಲೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.
ಅಲ್ಲದೆ, ಮಾಜಿ ಸಚಿವ ಎಚ್.ಕೆ. ಪಟೀಲ್, ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಾಟೀಲ್, ಮಾಜಿ ಸಚಿವರುಗಳಾದ ಜಗದೀಶ್ ಶೆಟ್ಟರ್, ಸಿ.ಎಂ. ಉದಾಸಿ, ಅಲ್ಕೌಡ್ ಹನುಮಂತಪ್ಪ, ಬಾಲಚಂದ್ರ ಜಾರಕಿಹೊಳೆ, ಗುರುಪಾದಪ್ಪ ನಾಗಮಾರಪಳ್ಳಿ ಮೊದಲಾದವರು ಕಣದಲ್ಲಿದ್ದು,ಸ ಇನ್ನೊಮ್ಮೆ ಗೆಲುವು ಸಾಧಿಸಲು ಹೊರಟ ನಡೆಸಿದ್ದಾರೆ.
ಒಟ್ಟು 69 ಸ್ಥಾನಗಳ ಪೈಕಿ ಕನಿಷ್ಠ 40 ಸ್ಥಾನಗಳನ್ನಾದರೂ ಪಡೆಯಬೇಕೆಂಬ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಕೊನೆ ಕ್ಷಣದ ಕಸರತ್ತಿಗೆ ಮುಂದಾಗಿದೆ.
|