ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಐಎಲ್‌ಗೆ ಕೆಂಪೇಗೌಡರ ಹೆಸರು: ಕರವೇ ಬೃಹತ್ ಪ್ರತಿಭಟನೆ  Search similar articles
ದೇವನಹಳ್ಳಿಯ ನೂತನ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು (ಬುಧವಾರ) ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.

ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವಾರು ಸಂಘಟನೆಗಳು ಕರೆದಿದ್ದ ಪ್ರತಿಭಟನೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಯಲಹಂಕದಿಂದ ರಾಜಭವನದವರೆಗೆ ಇಂದು ಬೃಹತ್ ನಡೆಸಿದ್ದಾರೆ. ಬಳಿಕ ರಾಜ್ಯಪಾಲರನ್ನು ಭೇಟಿಯಾದ ಸಂಘಟನೆಯ ಮುಖಂಡರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಆದಿ ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಾಲಗಂಗಾಧರನಾಥ ಸ್ವಾಮೀಜಿ, ಕೆಂಪೇಗೌಡರ ಹೆಸರಿಗೆ ಧಕ್ಕೆ ಬಂದರೆ ಸಹಿಸುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಹಾಗಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ನೂತನ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಎಚ್ಎಎಲ್ ಟ್ಯಾಕ್ಸಿ ಚಾಲಕರನ್ನೇ ಇಲ್ಲಿಯೂ ನೇಮಕ ಮಾಡಬೇಕು ಮೊದಲಾದ ಪ್ರಮುಖ ನಾಲ್ಕು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು.
ಮತ್ತಷ್ಟು
ನೂತನ ವಿಮಾನ ನಿಲ್ದಾಣಕ್ಕೆ ಗುರುವಾರ ಚಾಲನೆ
ಕಲಘಟಗಿ ಅತಿಸೂಕ್ಷ್ಮ ಪ್ರದೇಶ : ಪೀಟರ್ ನೇಮಕ
ಕಳ್ಳಭಟ್ಟಿ ದುರಂತಕ್ಕೆ ಮತ್ತೆ 8 ಬಲಿ
ಪೂರ್ವಸಮೀಕ್ಷೆ: ಅತಂತ್ರದಲ್ಲಿ ಬಿಜೆಪಿ ಮೇಲುಗೈ
ಮುಗಿದ ಮೂರನೇ ಹಂತದ ಚುನಾವಣಾ ಪ್ರಚಾರ
ಎಲ್ಲ ಬಡವರ ಸಾಲಮನ್ನಾ:ದೇವೇಗೌಡ