ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅತಂತ್ರ ಸ್ಥಿತಿ ಸಾಧ್ಯವಿಲ್ಲ: ಸಿದ್ದರಾಮಯ್ಯ  Search similar articles
ಹಣದುಬ್ಬರಕ್ಕೆ ಬಿಜೆಪಿ ಹೊಣೆ
ರಾಜ್ಯದ ಈ ಬಾರಿಯ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸಲಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 130 ಸ್ಥಾನಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ನೂರಕ್ಕೆ ನೂರರಷ್ಟು ಸತ್ಯ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವ ಸಂದರ್ಭದಲ್ಲಿಯೂ ಅನ್ಯ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸುವ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.

ದೇಶದಲ್ಲಿ ಹಣದುಬ್ಬರ ಏರಿಕೆಗೆ ಬಿಜೆಪಿಯೇ ನೇರ ಹೊಣೆಯಾಗುತ್ತದೆ. ಅಡ್ವಾಣಿಯವರು ದೇಶದುದ್ದಕ್ಕೂ ಸಂಚರಿಸಿ ಕೋಮುವಾದದ ಬೀಜ ಬಿತ್ತಿದರು ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಬೆಲೆ ಏರಿಕೆ ತಗ್ಗಲಿದೆ ಎಂದು ತಿಳಿಸಿದರು.
ಮತ್ತಷ್ಟು
ಕಳ್ಳಭಟ್ಟಿ ದುರಂತಕ್ಕೆ ಕಾಂಗ್ರೆಸ್, ಜೆಡಿಎಸ್ ಕಾರಣ: ಬಿಎಸ್‌ವೈ
ಬಿಐಎಲ್‌ಗೆ ಕೆಂಪೇಗೌಡರ ಹೆಸರು: ಕರವೇ ಬೃಹತ್ ಪ್ರತಿಭಟನೆ
ನೂತನ ವಿಮಾನ ನಿಲ್ದಾಣಕ್ಕೆ ಗುರುವಾರ ಚಾಲನೆ
ಕಲಘಟಗಿ ಅತಿಸೂಕ್ಷ್ಮ ಪ್ರದೇಶ : ಪೀಟರ್ ನೇಮಕ
ಕಳ್ಳಭಟ್ಟಿ ದುರಂತಕ್ಕೆ ಮತ್ತೆ 8 ಬಲಿ
ಪೂರ್ವಸಮೀಕ್ಷೆ: ಅತಂತ್ರದಲ್ಲಿ ಬಿಜೆಪಿ ಮೇಲುಗೈ