ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂತಿಮ ಘಟ್ಟದತ್ತ ರಾಜ್ಯ ವಿಧಾನಸಭಾ ಚುನಾವಣೆ  Search similar articles
699 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ರಾಜ್ಯದ 69 ವಿಧಾನಸಭಾ ಚುನಾವಣೆಯ ಕೊನೆ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲ ಕಡೆಗಳಲ್ಲಿಯೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಉತ್ತರ ಕರ್ನಾಟಕದ 69 ಕ್ಷೇತ್ರಗಳಲ್ಲಿ 699 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 1.18ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಮೂರನೇ ಹಂತದಲ್ಲಿ ಒಟ್ಟು 12,381 ಮತಗಟ್ಟೆಗಳಿದ್ದು, ನ್ಯಾಯಸಮ್ಮತ ಮತದಾನಕ್ಕಾಗಿ 53 ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.

ಮೊದಲೆರಡು ಹಂತಗಳ 155 ಕ್ಷೇತ್ರಗಳ ಜನಾದೇಶ ಈಗಾಗಲೇ ಮತಯಂತ್ರದಲ್ಲಿ ಭದ್ರವಾಗಿದ್ದು, ಎಣಿಕೆಗೆ ದಿನಗಣನೆ ಆರಂಭಗೊಂಡಿದೆ. ಮೂರನೆ ಹಂತದಲ್ಲಿ ಬರುವ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ, ಡಿಜಿಟಲ್ ಛಾಯಾಚಿತ್ರ ತೆಗೆಯಲಾಗುವುದು. ನೆರೆ ರಾಜ್ಯಗಳಿಂದ ಅಕ್ರಮ ಮದ್ಯ ನುಸುಳದಂತೆ ಗಡಿಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ.

ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಧಾರವಾಡದಲ್ಲಿ 22 ಪ್ರಕರಣಗಳನ್ನು ದಾಖಲಿಸಲಾಗಿದೆ. 12 ಕೋಟಿ ರೂ. ಮೌಲ್ಯದ 1 ಕೆಜಿ ಚಿನ್ನ, ಆರೂವರೆ ಲಕ್ಷ ರೂ, ನಗದು, ಕಾರು ಇನ್ನಿತರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್ ತಿಳಿಸಿದ್ದಾರೆ.

ಮತ್ತಷ್ಟು
ಅತಂತ್ರ ಸ್ಥಿತಿ ಸಾಧ್ಯವಿಲ್ಲ: ಸಿದ್ದರಾಮಯ್ಯ
ಕಳ್ಳಭಟ್ಟಿ ದುರಂತಕ್ಕೆ ಕಾಂಗ್ರೆಸ್, ಜೆಡಿಎಸ್ ಕಾರಣ: ಬಿಎಸ್‌ವೈ
ಬಿಐಎಲ್‌ಗೆ ಕೆಂಪೇಗೌಡರ ಹೆಸರು: ಕರವೇ ಬೃಹತ್ ಪ್ರತಿಭಟನೆ
ನೂತನ ವಿಮಾನ ನಿಲ್ದಾಣಕ್ಕೆ ಗುರುವಾರ ಚಾಲನೆ
ಕಲಘಟಗಿ ಅತಿಸೂಕ್ಷ್ಮ ಪ್ರದೇಶ : ಪೀಟರ್ ನೇಮಕ
ಕಳ್ಳಭಟ್ಟಿ ದುರಂತಕ್ಕೆ ಮತ್ತೆ 8 ಬಲಿ