ರಾಜ್ಯದ 8 ಜಿಲ್ಲೆಯ 69 ಕ್ಷೇತ್ರಗಳ 12,381 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ಪ್ರಾರಂಭಗೊಂಡಿದೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮ ಹಾಗೂ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆ ನಡೆದಿರುವ ಕುರಿತು ವರದಿ ಬಂದಿಲ್ಲ.
ಜೇವರ್ಗಿಯಲ್ಲಿ ಇತಿಹಾಸ ನಿರ್ಮಿಸಲು ಹೊರಟಿರುವ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ತಮ್ಮ ಕುಟುಂಬದೊಂದಿಗೆ ಬಂದು ಮತಚಲಾಯಿಸಿದರು. ಹಾಗೆಯೇ ಚಿತ್ತಾಪುರದಿಂದ ಕಣಕ್ಕಿಳಿದಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಜೇವರ್ಗಿಯ ವಿಧಾನಸಭಾ ಕ್ಷೇತ್ರದಲ್ಲಿ ಮಾನಸಿಕ ಅಸ್ವಸ್ಥನೋರ್ವ ಮತದಾನ ಚಲಾಯಿಸಲು ಮತಗಟ್ಟೆ ಬಂದು ಮತಯಂತ್ರ ನೋಡಿದಾಗ ಮತದಾನ ಮಾಡಲು ಹಿಂಜರಿದ. ಎಷ್ಟೇ ಪ್ರಯತ್ನ ನಡೆಸಿದರೂ ಮತದಾನ ಮಾಡಲು ಒಪ್ಪಲಿಲ್ಲ. ಕೊನೆಗೆ ಆತ ಮತಚಲಾಯಿಸದೆ ಹಿಂತಿರುಗಿದ ಘಟನೆ ಜರುಗಿದೆ.
ಇದುವರೆಗೆ ಶೇ.9.18ರಷ್ಟು ಮತದಾನವಾಗಿರುವ ಕುರಿತು ವರದಿ ಬಂದಿದ್ದು, ಬಿಜಾಪುರದಲ್ಲಿ ಶೇ.13ರಷ್ಟು ಮತದಾನವಾಗಿದೆ.
|