ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆಗೂ ಬೇಕು ಸೆಮಿಫೈನಲ್, ಫೈನಲ್ ಶ್ರೀಗಳ ಸಲಹೆ  Search similar articles
ಕ್ರಿಕೆಟ್‌ನಂತೆ ಚುನಾವಣೆಯಲ್ಲೂ ಸೆಮಿಫೈನಲ್, ಫೈನಲ್ ಸುತ್ತುಗಳಿದ್ದರೆ, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರುವುದನ್ನು ತಪ್ಪಿಸಬಹುದು ಎಂದು ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಡೆದಿರುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆಯದಿದ್ದರೆ, ಅತಿ ಹೆಚ್ಚಿನ ಸ್ಥಾನಗಳನ್ನು ಪಡೆದಿರುವ ಎರಡು ಪಕ್ಷಗಳಿಗೆ ಇನ್ನೊಮ್ಮೆ ಚುನಾವಣೆ ನಡೆಸಬೇಕು ಮತ್ತು ಅದರಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ನೀಡಬೇಕು ಎಂದು ತಿಳಿಸಿದರು.

ಇಂತಹ ತಿದ್ದುಪಡಿಯನ್ನು ಚುನಾವಣಾ ಆಯೋಗ ಮಾಡಿದರೆ, ಮಾತ್ರ ರಾಜ್ಯದಲ್ಲಿ 5 ವರ್ಷಗಳ ಸ್ಥಿರ ಸರ್ಕಾರ ಸ್ಥಾಪನೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಳ್ಳಭಟ್ಟಿ ದುರಂತದ ಕುರಿತು ಮಾತನಾಡಿದ ಅವರು, ಕಳ್ಳಭಟ್ಟಿ ದುರಂತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ. ಇದು ಬಡವರ ಮೇಲೆ ನೇರ ಪರಿಣಾಮವಾಗುತ್ತದೆ. ಇದರಿಂದ ಸಾರಾಯಿ ಮತ್ತು ಮದ್ಯಗಳೆರಡನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಮತ್ತಷ್ಟು
ರಾಜ್ಯಕ್ಕೆ ಕಾಲಿಟ್ಟ ಮಾನ್ಸೂನ್: ನಾಲ್ಕು ಸಾವು
ಶಾಂತಿಯುತ ಮತದಾನ ಶೇ 9.18ರಷ್ಟು ಮತದಾನ
ಅಂತಿಮ ಘಟ್ಟದತ್ತ ರಾಜ್ಯ ವಿಧಾನಸಭಾ ಚುನಾವಣೆ
ಅತಂತ್ರ ಸ್ಥಿತಿ ಸಾಧ್ಯವಿಲ್ಲ: ಸಿದ್ದರಾಮಯ್ಯ
ಕಳ್ಳಭಟ್ಟಿ ದುರಂತಕ್ಕೆ ಕಾಂಗ್ರೆಸ್, ಜೆಡಿಎಸ್ ಕಾರಣ: ಬಿಎಸ್‌ವೈ
ಬಿಐಎಲ್‌ಗೆ ಕೆಂಪೇಗೌಡರ ಹೆಸರು: ಕರವೇ ಬೃಹತ್ ಪ್ರತಿಭಟನೆ