ಅಂತಿಮ ಹಂತದ ಚುನಾವಣೆ ಭರದಿಂದ ಸಾಗಿದೆ. ಬಿರುಸಿನಿಂದ ಮತದಾನ ನಡೆಯುತ್ತಿದ್ದಂತೆ, ಮತಯಂತ್ರದಲ್ಲಿನ ದೋಷ ಹಾಗೂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿರುವ ಕುರಿತು ವರದಿ ಬಂದ ವರದಿಗಳ ನಡುವೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಮತದಾನ ಚುರುಕಿನಿಂದ ಸಾಗಿದೆ.
ಹಾವೇರಿಯ 162ರ ಮತಗಟ್ಟೆಯಲ್ಲಿ ಹಾಗೂ ಮತಯಂತ್ರದ ದೋಷದಿಂದಾಗಿ ಕೆಲ ಕಾಲ ಮತದಾನ ಸ್ಥಗಿತಗೊಂಡಿದೆ. ಜೇವರ್ಗಿಯ ಸುರಪುರದ ಎಡಲಬಾವಿ ಮತಗಟ್ಟೆಯಲ್ಲಿ ಮತಯಂತ್ರದ ದೋಷದಿಂದಾಗಿ ಇದೀಗ ಮತದಾನ ಪ್ರಾರಂಭವಾಗಿದೆ.
ಗುಲ್ವರ್ಗಾದ ದೇವರಹಿಪ್ಪರಗಿ ಜಾಲಾವಾದ್‌ನಲ್ಲಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಯಿಂದಾಗಿ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು. ಬೀದರ್‌ನ ಯಕತಾಪುರಾ ಮತಗಟ್ಟೆಯ ಆವರಣದಲ್ಲಿ ರಾಜಕೀಯ ಪಕ್ಷಗಳು ಪ್ರಚಾರ ನಡೆಸಿದವು ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿದು ಬಂದಿದೆ.
ಅಲ್ಲದೆ, ಮುಂಡರಗಿಯ ಅತಿಕಟ್ಟೆಯಲ್ಲಿ ಮತದಾನ ಬಹಿಷ್ಕರಿಸಿದ ಘಟನೆ ನಡೆದಿದೆ. ಬಳಿಕ ಜಿಲ್ಲಾಧಿಕಾರಿ ಶ್ರೀರಾಮನ್‌ರಿಂದ ಮತದಾನ ಮಾಡುವಂತೆ ಮತದಾರರಲ್ಲಿ ಮನವೊಲಿಸುವ ಪ್ರಯತ್ನ ನಡೆಯಿತು.
ಈ ಮಧ್ಯೆ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜನತೆಯ ಒತ್ತಾಯದ ಮೇರೆಗೆ ಚಿತ್ತಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದೇನೆ. ಈ ಬಾರಿ ಮೈತ್ರಿಯ ಮಾತುಕತೆಯೇ ಇಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
|