ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇದು ನನ್ನ ಅಂತಿಮ ಚುನಾವಣೆ: ಧರಂಸಿಂಗ್  Search similar articles
ಇದು ನನ್ನ ಅಂತಿಮ ಚುನಾವಣೆ: ಧರಂಸಿಂಗ್ಒಂಬತ್ತನೇ ಭಾರಿ ಕಣಕ್ಕಿಳಿಯುವ ಮೂಲಕ ಇತಿಹಾಸ ನಿರ್ಮಿಸಲು ಹೊರಟಿರುವ ಜೇವರ್ಗಿ ಕ್ಷೇತ್ರದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಮುಂದಿನ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಜೇವರ್ಗಿಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ನನ್ನ ಕೊನೆಯ ವಿಧಾನಸಭಾ ಚುನಾವಣೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆಗಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಕ್ಷೇತ್ರದಲ್ಲಿ ಶಾಸಕನಾಗಿ ನಾನು ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಸಾಕಷ್ಟು ಯೋಜನೆಗಳು ಈ ಕ್ಷೇತ್ರದಲ್ಲಿ ಜಾರಿಯಾಗಿವೆ. ಆದರೆ ವಿನಾ ಕಾರಣ ವಿರೋಧ ಪಕ್ಷಗಳು ಅಪವಾದ ಹೊರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮತದಾರರು ತನ್ನ ಗೆಲುವಿನ ಬಗ್ಗೆ ಈಗಾಗಲೇ ನಿರ್ಧರಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಮತ್ತಷ್ಟು
ಗುಲ್ಬರ್ಗದಲ್ಲಿ ಚುರುಕುಗೊಂಡ ಮತದಾನ
ಚುನಾವಣೆಗೂ ಬೇಕು ಸೆಮಿಫೈನಲ್, ಫೈನಲ್ ಶ್ರೀಗಳ ಸಲಹೆ
ರಾಜ್ಯಕ್ಕೆ ಕಾಲಿಟ್ಟ ಮಾನ್ಸೂನ್: ನಾಲ್ಕು ಸಾವು
ಶಾಂತಿಯುತ ಮತದಾನ ಶೇ 9.18ರಷ್ಟು ಮತದಾನ
ಅಂತಿಮ ಘಟ್ಟದತ್ತ ರಾಜ್ಯ ವಿಧಾನಸಭಾ ಚುನಾವಣೆ
ಅತಂತ್ರ ಸ್ಥಿತಿ ಸಾಧ್ಯವಿಲ್ಲ: ಸಿದ್ದರಾಮಯ್ಯ