ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಳ್ಳಭಟ್ಟಿ ದುರಂತ: ಕಿಂಗ್‌ಪಿನ್, ಪತ್ನಿಯ ಬಂಧನ  Search similar articles
150ಕ್ಕೂ ಹೆಚ್ಚಿನ ಸಂಖ್ಯೆಯ ಜನರ ಸಾವಿಗೆ ಕಾರಣವಾದ ಕಳ್ಳಭಟ್ಟಿ ದುರಂತದ ಪ್ರಮುಖ ಆರೋಪಿ ಸೌಂದರ್ ರಾಜನ್ ಎಂಬಾತನನ್ನು ತಮಿಳುನಾಡಿನಿಂದ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೌಂದರ್ ಹಾಗೂ ಆತನ ಪತ್ನಿಯನ್ನು ಸಿಸಿಬಿ ಪೊಲೀಸರು ತಮಿಳುನಾಡಿದ ಧರ್ಮಪುರಿಯಲ್ಲಿ ವಶಕ್ಕೆ ತೆಗೆದುಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ. ಆರೋಪಿಯನ್ನು ನಗರದ ಗೌಪ್ಯ ಸ್ಥಳವೊಂದರಲ್ಲಿ ಇಟ್ಟು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳು ಕಾಡುಗೊಂಡನಹಳ್ಳಿ ಹಾಗೂ ದೇವರ ಜೀವನಹಳ್ಳಿ ಪ್ರದೇಶ ಸೇರಿದಂತೆ ನಕಲಿ ಮದ್ಯ ಮಾರಾಟ ಮಾಡುವ ದಂಧೆಯಲ್ಲಿ ಹಲವಾರು ವರ್ಷಗಳಿಂದ ತೊಡಗಿದ್ದರು. ಆದರೆ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದರು.

ಈ ಬಗ್ಗೆ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು ಸೌಂದರ್ ಹಾಗೂ ಆತನ ಪತ್ನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಳ್ಳಭಟ್ಟಿ ದುರಂತದ ದೊಡ್ಡ ತಿಮಿಂಗಲವನ್ನು ಪೊಲೀಸರು ಹಿಡಿದಂತಾಗಿದೆ.
ಮತ್ತಷ್ಟು
ಇದು ನನ್ನ ಅಂತಿಮ ಚುನಾವಣೆ: ಧರಂಸಿಂಗ್
ಗುಲ್ಬರ್ಗದಲ್ಲಿ ಚುರುಕುಗೊಂಡ ಮತದಾನ
ಚುನಾವಣೆಗೂ ಬೇಕು ಸೆಮಿಫೈನಲ್, ಫೈನಲ್ ಶ್ರೀಗಳ ಸಲಹೆ
ರಾಜ್ಯಕ್ಕೆ ಕಾಲಿಟ್ಟ ಮಾನ್ಸೂನ್: ನಾಲ್ಕು ಸಾವು
ಶಾಂತಿಯುತ ಮತದಾನ ಶೇ 9.18ರಷ್ಟು ಮತದಾನ
ಅಂತಿಮ ಘಟ್ಟದತ್ತ ರಾಜ್ಯ ವಿಧಾನಸಭಾ ಚುನಾವಣೆ