ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೂರನೇ ಹಂತದ ಮತದಾನ:ಹೆಸರುಗಳು ನಾಪತ್ತೆ  Search similar articles
ರಾಜ್ಯ ವಿಧಾನಸಭೆಯ ಮೂರನೇ ಹಂತದ ಚುನಾವಣೆಯಲ್ಲಿ ನಗರದ ಕೆಲವು ಮತಗಟ್ಟೆಗಳಲ್ಲಿ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲದೆ ನಿರಾಶೆಗೊಂಡು ಮನೆಗೆ ವಾಪಸ್ಸಾದ ಪ್ರಸಂಗಗಳು ಇಂದು ಮತಗಟ್ಟೆಯಲ್ಲಿ ಕಂಡು ಬಂದವು.

ನಗರದ ಹಳೇ ಹುಬ್ಬಳ್ಳಿಯ ಹೆಗ್ಗೇರಿ, ಮಂಟೂರು ರಸ್ತೆ, ಪಿ.ಬಿ. ರಸ್ತೆ ಮತಗಟ್ಟೆಗಳಲ್ಲಿ ಮತದಾನಕ್ಕೆಂದು ಹುರುಪಿನಿಂದ ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿಯೊಂದಿಗೆ ಅಗಮಿಸಿದರೆ, ಹೆಸರೇ ನಾಪತ್ತೆ!. ಇದರಿಂದ ಕೆಲವು ಕಡೆಗಳಲ್ಲಿ ಆಕ್ರೋಶಗೊಂಡ ಮತದಾರರು ಪ್ರತಿಭಟನೆಗಿಳಿದ ಘಟನೆ ನಡೆಯಿತು.

ಅಲ್ಲದೆ, ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಮತಗಟ್ಟೆ 57ರಲ್ಲಿ ವಿದ್ಯುನ್ಮಾನ ಮತಯಂತ್ರ ಕೆಟ್ಟ ಕಾರಣ ಕೆಲ ಹೊತ್ತು ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು. ಉಳಿದಂತೆ ಎಲ್ಲ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಗಾನವಿದೂಷಿ ಡಾ. ಗಂಗೂಬಾಯಿ ಹಾನಗಲ್ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷವಿರಲಿ ಪ್ರಜಾಪ್ರಭುತ್ವದ ಹಕ್ಕಾದ ಮತದಾನವನ್ನು ಮಾಡಿ ಉತ್ತಮ ಸರ್ಕಾರ ರಚನೆಗೆ ಮುಂದಾಗಿ ಎಂದು ಜನತೆಗೆ ಕರೆ ನೀಡಿದರು.
ಮತ್ತಷ್ಟು
ಕಳ್ಳಭಟ್ಟಿ ದುರಂತ: ಕಿಂಗ್‌ಪಿನ್, ಪತ್ನಿಯ ಬಂಧನ
ಇದು ನನ್ನ ಅಂತಿಮ ಚುನಾವಣೆ: ಧರಂಸಿಂಗ್
ಗುಲ್ಬರ್ಗದಲ್ಲಿ ಚುರುಕುಗೊಂಡ ಮತದಾನ
ಚುನಾವಣೆಗೂ ಬೇಕು ಸೆಮಿಫೈನಲ್, ಫೈನಲ್ ಶ್ರೀಗಳ ಸಲಹೆ
ರಾಜ್ಯಕ್ಕೆ ಕಾಲಿಟ್ಟ ಮಾನ್ಸೂನ್: ನಾಲ್ಕು ಸಾವು
ಶಾಂತಿಯುತ ಮತದಾನ ಶೇ 9.18ರಷ್ಟು ಮತದಾನ