ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ: ಪಟ್ಟು ಬಿಡದ ಕರವೇ  Search similar articles
ಆರಂಭದಲ್ಲೇ ಎದುರಾಗಿರುವ ಹಲವು ಅಡೆತಡೆಗಳ ನಡುವೆಯೂ ಮಹತ್ವಾಕಾಂಕ್ಷೆಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಕಾರ್ಯಾರಂಭದ ಹೊಸ್ತಿಲಲ್ಲಿ ನಿಂತಿದೆ. ಆದರೆ ಮತ್ತೆ ಉದ್ಘಾಟನೆಗೆ ವಿಘ್ನಗಳು ಕಾಣಿಸಿಕೊಂಡಿವೆ. ಇಂದು ಉದ್ಘಾಟನೆಗೊಳ್ಳುತ್ತಿರುವ ನೂತನ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮುಂದುವರೆಸಿದ್ದಾರೆ.

ಗಾಂಧಿನಗರದಿಂದ ಕರವೇ ಕಾರ್ಯಕರ್ತರು ಪ್ರತಿಭಟನೆ ಪ್ರಾರಂಭಿಸಿದ್ದು, ಉದ್ಘಾಟನೆಗೂ ಮೊದಲು ಕೆಂಪೇಗೌಡರ ಹೆಸರು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡದಿದ್ದರೆ ಪ್ರತಿಭಟನೆ ವಿಕೋಪಕ್ಕೆ ತಿರುಗಲಿದೆ ಎಂದು ಕರವೇ ಎಚ್ಚರಿಕೆ ನೀಡಿದೆ.

ತಮ್ಮ ಬೇಡಿಕೆಗಳಿಗೆ ಸರ್ಕಾರ ಹಾಗೂ ಬಿಐಎಎಲ್ ಸ್ಪಂದಿಸದಿದ್ದರೆ ಉಗ್ರ ಹೋರಾಟಕ್ಕೆ ಇಳಿಬೇಕಾಗುತ್ತದೆ. ಇದರಿಂದಾಗುವ ಅನಾಹುತಕ್ಕೆ ರಾಜ್ಯಸರ್ಕಾರವೇ ಹೊಣೆಯಾಗುತ್ತದೆ ಎಂದು ಕರವೇ ತಿಳಿಸಿದೆ.

ಈ ಮಧ್ಯೆ ಬಿಐಎಎಲ್ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಉದ್ಘಾಟನೆಗೆ ಎಲ್ಲಾ ರೀತಿಯಲ್ಲಿ ಸಜ್ಜುಗೊಂಡಿದೆ. ಕರವೇ ಕಾರ್ಯಕರ್ತರ ಈ ಪ್ರತಿಭಟನೆಯಿಂದ ಉದ್ಘಾಟನೆಗೆ ಯಾವುದೇ ತೊಡಕುಗಳು ಬಾರದಂತೆ ನಿಲ್ದಾಣದ ಸುತ್ತಮುತ್ತ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.
ಮತ್ತಷ್ಟು
ಕಳ್ಳಭಟ್ಟಿ: ಮತ್ತೆ ಮೂವರ ಬಂಧನ, ಪರಿಹಾರಕ್ಕೆ ಶಿಫಾರಸ್ಸು
ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಸರಕಾರ?
ಮತ ಎಣಿಕೆಯತ್ತ ಎಲ್ಲರ ಚಿತ್ತ
ಮೂರನೇ ಹಂತದ ಮತದಾನ:ಹೆಸರುಗಳು ನಾಪತ್ತೆ
ಕಳ್ಳಭಟ್ಟಿ ದುರಂತ: ಕಿಂಗ್‌ಪಿನ್, ಪತ್ನಿಯ ಬಂಧನ
ಇದು ನನ್ನ ಅಂತಿಮ ಚುನಾವಣೆ: ಧರಂಸಿಂಗ್