ಕಳ್ಳಭಟ್ಟಿ ಸೇವನೆಯಿಂದ ಇಂದು ನಗರದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದು, ಈ ಮೂಲಕ ಕಳ್ಳಭಟ್ಟಿ ಹಾಸನ ಜಿಲ್ಲೆಗೂ ವ್ಯಾಪಿಸಿದೆ.
ಸಾವನ್ನಪ್ಪಿದವರಲ್ಲಿ ಒರ್ವ ಮಹಿಳೆಯೂ ಸೇರಿದ್ದು, ಮದುವೆಗೆ ಬಂದವರಾಗಿದ್ದಾರೆ ಎನ್ನಲಾಗಿದೆ. ಕಳ್ಳಭಟ್ಟಿ ಸೇವಿಸಿದ ಸುಮಾರು 20ಕ್ಕೂ ಹೆಚ್ಚಿನ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಕಳ್ಳಭಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರದಲ್ಲಿ ವಳಲಹಳ್ಳಿಯಲ್ಲಿ ಹಾಸನ ಕಳ್ಳಭಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು ಸತ್ತವರ ಸಂಖ್ಯೆ 178ಕ್ಕೇರಿದ್ದು, ಈ ಘಟನೆಯಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.
ಈ ಮಧ್ಯೆ ಕಳ್ಳಭಟ್ಟಿ ದುರಂತದ ಕುರಿತು ಶೀಘ್ರದಲ್ಲಿ ಸಮಗ್ರ ಮಾಹಿತಿ ನೀಡುವಂತೆ ಅಬಕಾರಿ ಇಲಾಖೆಗೆ ರಾಜ್ಯಪಾಲರ ಸಲಹೆಗಾರ ಸುಧಾಕರ್ ರಾವ್ ಆದೇಶ ನೀಡಿದ್ದಾರೆ.
|