ವೃತ್ತಿ ಶಿಕ್ಷಣ ಪರೀಕ್ಷೆ(ಸಿಇಟಿ) ಫಲಿತಾಂಶ ನಾಳೆ ಪ್ರಕಟವಾಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕುರಿತ ಪ್ರಕಟಣೆಯನ್ನು ಹೊರಡಿಸಿದೆ. ನಾಳೆ ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು ಸರಕಾರಿ ವೆಬ್‌ಸೈಟ್‌ನಲ್ಲಿ ಫಲಿತಾಂಶಗಳನ್ನು ಪಡೆಯಬಹುದಾಗಿದೆ.
ಬೆಂಗಳೂರಿನ ವಿದ್ಯಾರ್ಥಿಗಳು ಬಿಎಸ್ಎನ್ಎಲ್ ಸ್ಥಿರ ದೂರವಾಣಿ 1255225 ಹಾಗೂ ರಾಜ್ಯದ ಇತರ ಅಭ್ಯರ್ಥಿಗಳು 080-12552255 ಮೂಲಕ ಪಡೆಯಬಹುದು. ಎಸ್ಎಂಎಸ್ ಮೂಲಕ ಫಲಿತಾಂಶ ಪಡೆಯಲು ಪ್ರವೇಶ ಪತ್ರದ ಸಂಖ್ಯೆಯ ಮೊದಲ ಎರಡು ಅಂಕಿಗಳಿಗೆ ನಿಗದಿಪಡಿಸಿರುವ ಸಂಖ್ಯೆಗಳನ್ನು ಟೈಪ್ ಮಾಡಿ ನಂತರ ಮುಂದಿನ ಸಂಖ್ಯೆಗಳನ್ನು ಸೇರಿಸಿ 55352 ಗೆ ಕಳುಹಿಸಬಹುದು.
|