ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಳ್ಳಭಟ್ಟಿ: ಇದೀಗ ನಕಲಿಗಳ ಹಾವಳಿ  Search similar articles
ಕಳ್ಳಭಟ್ಟಿಯ ಕರಾಳ ನರ್ತನವೇನೋ ಮುಗಿಯಿತು. ಆದರೆ, ಅದನ್ನು ಕುಡಿದು ಅರಗಿಸಿಕೊಂಡವರು ಕಡಿಮೆ ಮಂದಿಯಲ್ಲ.

ಕೋಲಾರ, ಕೃಷ್ಣಗಿರಿ, ಬೆಂಗಳೂರು ಪ್ರದೇಶದಲ್ಲಿ ಕಳ್ಳಭಟ್ಟಿ ಹಲವರನ್ನು ಬಲಿತೆಗೆದುಕೊಂಡಿತು. ಆದರೆ ಕಳ್ಳಭಟ್ಟಿ ಕುಡಿದು ಬದುಕುಳಿದಿರುವವರಿಗೆ ಈಗ ಜೀವಭಯ ಕಾಡುತ್ತಿದೆ. ಭಟ್ಟಿ ಕುಡಿದು ಅರಗಿಸಿಕೊಂಡಿದ್ದರೂ ಮುಂದೆ ಅಪಾಯವಾಗಬಹದು ಎಂದು ಅವರು ಭಯಭೀತರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಸ್ವಾರಸ್ಯಕರ ಸಂಗತಿಯೆಂದರೆ, ಕಳ್ಳಭಟ್ಟಿ ಕುಡಿಯದಿದ್ದರೂ ನಾವು ಕಳ್ಳಭಟ್ಟಿ ಕುಡಿದಿದ್ದೇವೆ ಎಂದು ಆಸ್ಪತ್ರೆಗೆ ಬಂದು ದಾಖಲಾಗುತ್ತಿರುವುದು. ಕಳ್ಳಭಟ್ಟಿ ಕುಡಿದು ಅಸ್ವಸ್ಥರಾದವರಿಗೆ ಸರ್ಕಾರದಿಂದ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆಯೇ ಕುಡಿಯದವರೂ ಆಸ್ಪತ್ರೆಗೆ ಬರುತ್ತಿರುವುದಕ್ಕೆ ಕಾರಣ. ದುರಂತ ನಡೆದಾಗಿಂದ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡುವಲ್ಲಿ ಹಗಲು-ರಾತ್ರಿ ಬ್ಯುಸಿ. ಆದರೆ ಈಗ ನಕಲಿ ಸಂತ್ರಸ್ತರನ್ನೂ ಸಂತೈಸಬೇಕಾದ ಪಾಡು ಅವರದು.



ಮತ್ತಷ್ಟು
ಇಂದು ಮಧ್ಯರಾತ್ರಿ ದೇವನಹಳ್ಳಿಯಲ್ಲಿ ವಿಮಾನ ಟೇಕಾಫ್
ಸಿಇಟಿ ಫಲಿತಾಂಶ ನಾಳೆ
ಹಾಸನದಲ್ಲೂ ಕಳ್ಳಭಟ್ಟಿ ದುರಂತ: ಐವರ ಸಾವು
ಮೂರು ಹಂತಗಳಲ್ಲಿ ಶೇ.64.72ರಷ್ಟು ಮತದಾನ
ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ: ಪಟ್ಟು ಬಿಡದ ಕರವೇ
ಕಳ್ಳಭಟ್ಟಿ: ಮತ್ತೆ ಮೂವರ ಬಂಧನ, ಪರಿಹಾರಕ್ಕೆ ಶಿಫಾರಸ್ಸು