ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಹೊಸ ಕಾರ್ಯಾರಂಭಕ್ಕೆ ಮುನ್ನ ದೇವರನ್ನು ಸ್ತುತಿಸುವ ಸಂಪ್ರದಾಯ ಭಾರತೀಯರದ್ದು. ಈ ಸಂಪ್ರದಾಯ ಶುಕ್ರವಾರ ರಾತ್ರಿ ಕಾರ್ಯಾರಂಭ ಮಾಡಿದ ವಿಮಾನ ನಿಲ್ದಾಣದಲ್ಲೂ ಕಂಡು ಬಂತು.
ವಿಮಾನ ನಿಲ್ದಾಣದ ಅಧಿಕಾರಿಗಳು ಶುಕ್ರವಾರ ಸಾಂಪ್ರದಾಯಿಕ ಪೂಜೆ ಪುನಸ್ಕಾರ ನಡೆಸುವುದನ್ನು ಮರೆಯಲಿಲ್ಲ. ಪ್ರಯಾಣಿಕರಿಗೆ ಮಾಹಿತಿ ನೀಡುವ ಹಾಗೂ ಇತರ ಕೆಲವು ಕೌಂಟರ್‌ಗಳನ್ನು ಹೂವು ಹಾರ ತಳೀರು ತೋರಣಗಳಿಂದ ಅಲಂಕರಿಸಿ ಪೂಜೆ ಮಾಡಲಾಗಿದ್ದು, ನೆರೆದಿದ್ದವರ ಮುಖದಲ್ಲಿ ಹಬ್ಬದ ವಾತಾವರಣ ಎದ್ದು ಕಾಣುತಿತ್ತು.
ನೂತನ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಬ್ರೂನರ್ ಸೇರಿದಂತೆ ಇತರ ಅಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡು ಹೊಸದಾಗಿ ಕಾರ್ಯಾರಂಭಿಸಿದ ವಿಮಾನ ನಿಲ್ದಾಣ ಯಾವುದೇ ವಿಘ್ನಗಳಿಲ್ಲದೇ ಮುಂದುವರೆಯಲಿ ಎಂದು ಪ್ರಾರ್ಥಿಸಿದರು. ವಲಸೆ ವಿಭಾಗದ ಡಿಸಿಪಿ ಎನ್.ಎಸ್. ಮುತ್ತಣ್ಣ ಉಪಸ್ಥಿತರಿದ್ದರು.
|