ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷೇತರರು, ಬಂಡಾಯದವರತ್ತ ವಾಲುತ್ತಿರುವ ಬಿಜೆಪಿ  Search similar articles
ವಿಧಾನ ಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು (110) ಗಳಿಸಿರುವ ಭಾರತೀಯ ಜನತಾ ಪಕ್ಷವು ಸರಕಾರ ರಚನೆಗೆ ಅಗತ್ಯ ಬಹುಮತ ಪಡೆಯಲು ಅವಶ್ಯವಿರುವ 3 ಶಾಸಕರ ಬೆಂಬಲಕ್ಕಾಗಿ ಪಕ್ಷೇತರ ಅಭ್ಯರ್ಥಿಗಳತ್ತ ವಾಲಿದ್ದು, ಈ ನಿಟ್ಟಿನಲ್ಲಿ ಭಾನುವಾರ ರಾತ್ರಿಯಿಂದಲೇ ಸರಕಾರ ರಚನೆಯ ಕಸರತ್ತು ಪಕ್ಷದ ನಾಯಕರಲ್ಲಿ ಕಂಡು ಬರುತ್ತಿದೆ.

ಇಂದು ಬಿಜೆಪಿ ತನ್ನ ಶಾಸಕಾಂಗ ಸಭೆಯನ್ನು ನಡೆಸಲಿದ್ದು, ಇಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆರಿಸಿ ನಂತರ ರಾಜ್ಯಪಾಲರ ಬಳಿ ತೆರಳಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ಈಗಾಗಲೇ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿರುವ ಶಾಸಕರನ್ನು ಬಿಜೆಪಿ ಪುನಃ ಸ್ವಾಗತ ನೀಡುವುದು ಖಚಿತವಾದಂತೆ ಆಗಿದೆ.

ಸರ್ಕಾರ ರಚಿಸುವ ಮುನ್ನ ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಬೇಕಾದ ಅವಶ್ಯಕತೆ ಇರುವ ಕಾರಣ ಪಕ್ಷೇತರರನ್ನು ಸೆಳೆಯಲು ಭಾನುವಾರ ತಡ ರಾತ್ರಿವರೆಗೂ ಕಸರತ್ತು ನಡೆದಿದೆ. ಪಕ್ಷೇತರರಾಗಿ ಜಯಗಳಿಸಿದ ವರ್ತೂರು ಪ್ರಕಾಶ್ ತಮ್ಮ ಹಿರಿಯ ನಾಯಕರು ಹೇಳಿದಂತೆ ತಾವು ನಡೆಯುವುದಾಗಿ ತಿಳಿಸಿದ್ದಾರೆ. ಆದರೆ ಇಂದು ಮಧ್ಯಾಹ್ನ (ಸೋಮವಾರ) ನಡೆಯುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವ ಪಕ್ಷೇತರರು ಭಾಗವಹಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮತ್ತಷ್ಟು
ನಾಳೆ ಬಿಜೆಪಿ ಶಾಸಕಾಂಗ ಪಕ್ಷ ಸಭೆ
ಅಪರಾಧ, ಭಯೋತ್ಪಾದನೆಮುಕ್ತ ರಾಜ್ಯ: ಯಡಿಯೂರಪ್ಪ
ಮೊದಲ 2 ಗೆಲುವು ಬಿಜೆಪಿಗೆ, ಜಯಪ್ರಕಾಶ್ ಹೆಗ್ಡೆ ಸೋಲು
ಅಂಬರೀಶ್, ಪ್ರಕಾಶ್ ಹಿನ್ನಡೆ, ಖರ್ಗೆ, ಧರಂ ಮುನ್ನಡೆ
ಜನಾದೇಶ: ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ
ಮತ್ತೆ ಕಿಂಗ್ ಮೇಕರ್ ಆಗುತ್ತದೆಯೇ ಜೆಡಿಎಸ್?