ಸರಣಿ ಕಳ್ಳಬಟ್ಟಿ ದುರಂತಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಮುಂದಿನ ಸರಕಾರವು ಮದ್ಯ ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ. ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಭಾವಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕುರಿತು ಸುಳಿವು ನೀಡಿದ್ದಾರೆ.
ಹೊಸ ಸರಕಾರವು ಪಾನ ನಿಷೇಧವನ್ನು ಮರುಪರಿಶೀಲಿಸಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಭಾನುವಾರ ನಕಾರಾತ್ಮಕವಾಗಿ ಉತ್ತರಿಸಿದ ಯಡಿಯೂರಪ್ಪ, ಈ ಬಗ್ಗೆ ನಾವು ಮತ್ತಷ್ಟು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಪಾನ ನಿಷೇಧ ಹಿಂತೆಗೆತದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು 2007ರಲ್ಲಿ ತಮ್ಮ ಅಲ್ಪಕಾಲೀನ ಸರಕಾರದ ಅವಧಿಯಲ್ಲಿ ಪಾನನಿಷೇಧ ಜಾರಿಗೊಳಿಸಿದ್ದ ಯಡಿಯೂರಪ್ಪ ಹೇಳಿದರು.
ಇತ್ತೀಚೆಗೆ ನಡೆದ ಕಳ್ಳಬಟ್ಟಿ ದುರಂತ ಇನ್ನು ಮುಂದೆ ನಡೆಯದಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗುತ್ತದೆ ಎಂದ ಅವರು, ಬಿಜೆಪಿಯನ್ನು ಅಧಿಕಾರದ ಸನಿಹ ತಂದು ನಿಲ್ಲಿಸಿದ ರಾಜ್ಯದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
|