ಜೆಡಿಎಸ್‌ನಿಂದ ಹೊರನಡೆದು ತಮ್ಮದೇ ಸುವರ್ಣಯುಗ ಪಕ್ಷ ಕಟ್ಟಿದ ಮಹಿಮಾ ಜೆ. ಪಟೇಲ್ ಅವರ ಉಪವಾಸ ಫಲಿಸಲಿಲ್ಲ. ಕಳೆದ 27 ದಿನಗಳಿಂದ ಉಪವಾಸ ನಿರತರಾಗಿ ಚುನಾವಣಾ ಫಲಿತಾಂಶ ಎದುರು ನೋಡುತ್ತಿದ್ದ ಮಹಿಮಾ ಪಟೇಲ್ ಫಲಿತಾಂಶದ ದಿನ ಭಾನುವಾರ ತಮ್ಮ ಉಪವಾಸ ಕೈ ಬಿಟ್ಟಿದ್ದಾರೆ. ಸುವರ್ಣಯುಗ 13ನೇ ವಿಧಾನಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿದೆ.
ಚನ್ನಗಿರಿ ಕ್ಷೇತ್ರದಿಂದ ಸುವರ್ಣಯುಗ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಮಹಿಮಾ ಪಟೇಲ್ 9519 ಮತ ಗಳಿಸಿ ಸೋಲುಂಡಿದ್ದರು. ಜನತೆಯಲ್ಲಿ ಬದಲಾವಣೆ ಬೀಜ ಬಿತ್ತಿದ್ದೇನೆ. ಇದು ಮುಂದಕ್ಕೆ ಫಲ ನೀಡುತ್ತದೆ ಎಂಬ ವಿಶ್ವಾಸವಿದೆ. ತಮ್ಮ ಪ್ರಯತ್ನವನ್ನು ಮುಂದುವರೆಸಿ ಜನತೆಯಲ್ಲಿ ಜಾಗೃತಿ ಮೂಡಿಸುವುದಾಗಿ ತಮ್ಮ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದರು.
ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ ಎಂದ ಮಹಿಮಾ ಪಟೇಲ್ ಇನ್ನೂ ಕೆಲವು ದಿನಗಳ ಕಾಲ ಎಳನೀರು ಹಾಗೂ ಹಣ್ಣಿನ ರಸ ಸೇವಿಸುವುದಾಗಿ ಹೇಳಿದ್ದಾರೆ.
|