ವಿಧಾನ ಸಭಾ ಚುನಾವಣೆಯಲ್ಲಿ ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಜಯಗಳಿಸಿದ 28 ಅಭ್ಯರ್ಥಿಗಳ ಪೈಕಿ ನಾಲ್ಕು ಮಂದಿಯ ವಿರುದ್ಧ ಈ ಹಿಂದೆ ಕ್ರಿಮಿನಲ್ ಕೇಸುಗಳು ದಾಖಲಾಗಿವೆ.
ಪ್ರಜಾತಂತ್ರ ಸುಧಾರಃಣಾ ಸಂಘಟನೆಯ ಕರ್ನಾಟಕ ಚುನಾವಣಾ ನಿಗಾ ಸಮಿತಿ ಚುನಾವಣಾ ಕಣದಲ್ಲಿದ್ದ ಅಪರಾಧ ಹಿನ್ನೆಲೆಯಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಇದರಲ್ಲಿ ವಿಜೇತರಾದ ಬಿಜೆಪಿಯ ಶೋಭಾ ಕರಂದ್ಲಾಜೆ, ಎನ್.ಎಸ್ ನಂದೀಶ್ ರೆಡ್ಡಿ, ಹೇಮಚಂದ್ರ ಸಾಗರ್ ಹಾಗೂ ಜೆಡಿಎಸ್‌ನ ಜಮೀರ್ ಅಹಮದ್ ಖಾನ್ ವಿರುದ್ಧ ಕ್ರಿಮಿನಲ್ ಕೇಸುಗಳು ದಾಖಲಾಗಿವೆ.
ಕಾನೂನು ಬಾಹಿರವಾಗಿ ಜನರನ್ನು ಕಲೆಹಾಕಿರುವ, ಮಾರಕಾಸ್ತ್ರಗಳಿಂದ ದೊಂಬಿಯಲ್ಲಿ ಭಾಗವಹಿಸಿ ಶಾಂತಿ ಕದಡಿದ ಆರೋಪ ಶೋಭಾ ಕರಂದ್ಲಾಜೆ ಮೇಲಿದೆ. ನಂದೀಶ್ ರೆಡ್ಡಿ ವಿರುದ್ಧ ಕಾನೂನುಬಾಹಿರವಾಗಿ ಜನರನ್ನು ಸಂಘಟಿಸಿದ್ದು ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಇದೆ. ಹೇಮಚಂದ್ರ ಸಾಗರ್ ವಿರುದ್ಧ ವಂಚನೆಯ ಆರೋಪ ದಾಖಲಾಗಿದೆ. ಇನ್ನೂ ಜೆಡಿಎಸ್‌ನ ಜಮೀರ್ ವಿರುದ್ಧ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಆಸ್ತಿ ಲಪಟಾಯಿಸಿದ ಆರೋಪವಿದೆ.
|