ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ನ ಜನಾರ್ಧನ ಪೂಜಾರಿ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಭಾರತೀಯ ಜನತಾ ಪಕ್ಷವು ಪಡೆದಿದ್ದರೂ ಅದಕ್ಕೆ ಸ್ಪಷ್ಟ ಜನಾದೇಶ ದೊರೆತಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಜನತೆ ನೀಡಿರುವ ತೀರ್ಪಿಗೆ ತಾವು ತಲೆಬಾಗುವುದಾಗಿ ಹೇಳಿದ ಅವರು ,ಈ ಫಲಿತಾಂಶದಿಂದ ಬಿಜೆಪಿ ಹಿಗ್ಗುವ ಅಗತ್ಯವಿಲ್ಲ ಎಂದರು. ಕಳೆದ ಚುನಾವಣೆಗಿಂತ ಈ ಸಲ ಎಲ್ಲಾ ಪಕ್ಷಗಳಿಗಿಂತ ಬಿಜೆಪಿ ಹೆಚ್ಚು ಸ್ಥಾನ ಗಳಿಸಿರುವುದಕ್ಕೆ ನಾವು ಬಿಜೆಪಿಯನ್ನು ಅಭಿನಂದಿಸುತ್ತೇನೆ.
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಿದ್ದು, ಕಳೆದೆ ಬಾರಿ 2 ಸ್ಥಾನಗಳನ್ನು ಗೆದ್ದಿದ್ದರೆ ಈ ಬಾರಿ 4ಕ್ಕೇರಿದೆ. ಇದು ಸಂತಸದ ವಿಷಯ. ನಾವು ಸೋಲಿನಿಂದ ಕಂಗೆಟ್ಟಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ ಎಂದರು.
|