ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಯಡಿಯೂರಪ್ಪನವರ ನಿವಾಸದಲ್ಲಿ ಈಗಾಗಲೇ ಆರಂಭವಾಗಿದ್ದು, ಪಕ್ಷದ ನಾಯಕರಾದ ಅರುಣ್ ಜೆಟ್ಲಿ, ವೆಂಕಯ್ಯ ನಾಯ್ಡು ಹಾಗೂ ಸದಾನಂದ ಗೌಡ ಸೇರಿದಂತೆ ಪಕ್ಷದ ನಾಯಕರು ಭಾಗವಹಿಸಿದ್ದಾರೆ. ಇದರಿಂದ ಬಿಜೆಪಿ ಸರ್ಕಾರ ರಚನೆಯಲ್ಲಿ ಒಂದೆಜ್ಜೆ ಮುಂದಿಟ್ಟಿದೆ.
ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪನವರನ್ನು ಶಾಸಕಾಂಗ ಸಭೆಯ ಅಧಿಕೃತ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನಂತರ ಸರ್ಕಾರ ರಚಿಸಲು ರಾಜ್ಯಪಾಲರಿಂದ ಆಹ್ವಾನ ನೀರೀಕ್ಷಿಸುತ್ತಿದ್ದು, ಒಂದು ವೇಳೆ ಆಹ್ವಾನ ಬರದಿದ್ದರೆ ಯಡಿಯೂರಪ್ಪ ಹಾಗೂ ಶಾಸಕರು ಸ್ವತ: ರಾಜ್ಯಪಾಲರ ಬಳಿ ಹೋಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಲಿದ್ದಾರೆ.
ಸಭೆಯಲ್ಲಿ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ಪಕ್ಷೇತರ ಶಾಸಕರು ಈಗಾಗಲೇ ರೆಡ್ಡಿ ಸಹೋದರರ ಮನೆಯಲ್ಲಿದ್ದಾರೆ ಎಂಬ ಸುದ್ದಿ ಕೂಡಾ ಹಬ್ಬಿದೆ. ಅಂತೂ ಬಿಜೆಪಿ ಸರ್ಕಾರ ರಚಿಸುವುದು ದೃಢಪಟ್ಟಿದೆ.
|