ಚುನಾವಣೆಯಲ್ಲಿ ವಿಜಯಿಯಾದರೆ ತಮ್ಮ ಕಾರ್ಯಕರ್ತರಿಗೆ ಬೆಂಬಲಿಗರಿಗೆ ಗುಂಡು-ತುಂಡುವಿನ ಪಾರ್ಟಿ ನೀಡಿ ವಿಜಯೋತ್ಸವ ಆಚರಿಸುವುದು ಇಂದು ಸಾಮಾನ್ಯವಾಗುತ್ತಿದೆ. ಆದರೆ ಇಲ್ಲೊಬ್ಬರು ಶಾಸಕ ಇದಕ್ಕೆ ವಿರುದ್ಧವಾಗಿ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರು ನಗರ ದಕ್ಷಿಣದಿಂದ ಸ್ಪರ್ಧಿಸಿ ಜಯಗಳಿಸಿದ ಬಿಜೆಪಿಯ ಯೋಗೀಶ್ ಭಟ್ ಮಂಗಳೂರಿನ ಸರ್ಕಾರಿ ವೆನ್ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಗಳ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ತಮ್ಮ ವಿಜಯೋತ್ಸವ ಆಚರಿಸಿಕೊಂಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಪ್ರತಿಯೊಬ್ಬ ರೋಗಿಗೂ ಹಣ್ಣು ನೀಡಿ ತಮ್ಮ ಕೆಲಸ ಕಾರ್ಯ ಸುಗಮವಾಗುವಂತೆ ಆಶೀರ್ವಾದ ಕೋರಿದರು. ಸರಳ ಸಜ್ಜನಿಕೆಯ ವ್ಯಕ್ತಿಯಾದ ಯೋಗೀಶ್ ಭಟ್ ನಾಲ್ಕನೇ ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಗುಂಡು-ತುಂಡು ನೀಡಿ ವಿಜಯೋತ್ಸವ ಆಚರಿಸುವ ಶಾಸಕರಿಗೆ ಇವರು ಮಾದರಿಯಾಗಿ ನಿಂತಿದ್ದಾರೆ.
|