ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಹುಮತದ ಅಂಚಿಗೆ ಬಂದು ನಿಂತ ಬಿಜೆಪಿ  Search similar articles
ಬೆಂಗಳೂರು: ಸರಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆಯನ್ನು ಭಾರತೀಯ ಜನತಾ ಪಕ್ಷ ಹೊಂಚಿಕೊಂಡಿದೆ. ಹಾಗಾಗಿ ಮೂರು ಸ್ಥಾನಗಳ ಕೊರತೆ ಅನುಭವಿಸುತ್ತಿದ್ದ ಪಕ್ಷವೀಗ ಸರಕಾರ ರಚನೆಗೆ ಅಗತ್ಯವಿರುವ ಸಂಖ್ಯೆಯನ್ನು ತಲುಪಿದಂತಾಗಿದೆ.

ಬಳ್ಳಾರಿಯ ರೆಡ್ಡಿ ಸಹೋದರರು ಸೋಮವಾರ ಸಂಜೆ ಯಡಿಯೂರಪ್ಪ ನಿವಾಸದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೆ ಇಬ್ಬರು ಪಕ್ಷೇತರ ಶಾಸಕರನ್ನು ಕರೆದುಕೊಂಡು ಬಂದು ಅಚ್ಚರಿಗೆ ಕಾರಣವಾದರು. ಬಿಜೆಪಿಯಿಂದಲೇ ಬಂಡಾಯವೆದ್ದಿದ್ದ ಕನಕಗಿರಿ ಶಾಸಕ ಶಾಸಕ ಶಿವರಾಜ್ ತಂಗಡಗಿ, ಹೊಸದುರ್ಗದ ಜೆಡಿಎಸ್ ಗೂಳಿಹಟ್ಟಿ ಶೇಖರ್ ಅವರು ಸರ್ಕಾರ ರಚನೆಗೆ ಬೆಂಬಲ ಸೂಚಿಸಿದ್ದು ಸಂಜೆಯ ವೇಳೆಗೆ ಇನ್ನೂ ಎರಡು ಮಂದಿ ಪಕ್ಷೇತರರು ಬೆಂಬಲ ಸೂಚಿಸುವ ಸುಳಿವನ್ನು ಯಡಿಯೂರಪ್ಪ ಹೇಳಿದ್ದಾರೆ.

ನಾಯಕರಾಗಿ ಯಡಿಯೂರಪ್ಪ ಆಯ್ಕೆ:
ಈ ನಡುವೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿಎಸ್ ಯಡಿಯೂರಪ್ಪ ಆಯ್ಕೆಯಾಗಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಯಡಿಯೂರಪ್ಪ ಇಂದು ಸಂಜೆ ರಾಜ್ಯಪಾಲರನ್ನು ತಾವು ಸೇರಿದಂತೆ ತಮ್ಮ ಪಕ್ಷದ ಪ್ರಮುಖರು ಭೇಟಿಯಾಗಲಿದ್ದಾರೆ ಎಂದರು.
ಮತ್ತಷ್ಟು
ರೋಗಿಗಳಿಗೆ ಹಣ್ಣು ವಿತರಿಸಿ ವಿಜಯೋತ್ಸವ ಆಚರಿಸಿದ ಶಾಸಕ
ಬಿಜೆಪಿಯಿಂದ ಪಕ್ಷೇತರರಿಗೆ ಒತ್ತಡ: ಖರ್ಗೆ ಆರೋಪ
ಶಾಸಕಾಂಗ ಪಕ್ಷದ ಅಧ್ಯಕ್ಷರಾಗಿ ಯಡಿಯೂರಪ್ಪ ಆಯ್ಕೆ
ಬಿಜೆಪಿಗೆ ಹಿಗ್ಗಬೇಕಾದ ಅಗತ್ಯವಿಲ್ಲ: ಪೂಜಾರಿ
ಸೋಲಿಗೆ ಹೊರಟ್ಟಿ ಕಾರಣ: ಗುರುರಾಜ
ಬಿಜೆಪಿ ಅವಕಾಶ ತಪ್ಪಿಸಲು ಕಾಂಗ್ರೆಸ್-ದಳ ತಂತ್ರ