ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್ ಒಡಿಯುವ ಪ್ರಯತ್ನ: ಕುಮಾರಸ್ವಾಮಿ ಆರೋಪ  Search similar articles
ಸರ್ಕಾರ ರಚನೆಗೆ ಪಕ್ಷೇತರರನ್ನು ಖರೀದಿಸಿರುವ ಬಿಜೆಪಿ ಮುಖಂಡರು, ಜೆಡಿಎಸ್‌ನ್ನು ಒಡೆಯುವ ಯತ್ನ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಿಂದ ದೂರವಿರಲು ಇಚ್ಛಿಸುವ ಶಾಸಕರ ಗುಂಪನ್ನು ಸಿದ್ಧಪಡಿಸಿ, ಬಿಜೆಪಿ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲುವಂತೆ ಮಾಡುವ ಪ್ರಯತ್ನವನ್ನು ಬಿಜೆಪಿ ಮುಖಂಡರು ಮಾಡಿದ್ದಾರೆ ಎಂದು ದೂರಿದರು.

ಚುನಾವಣೆಯಲ್ಲಿ ಜೆಡಿಎಸ್ ಅನುಭವಿಸಿದ ಸೋಲಿಗೆ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಾಟೀಲ್ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ನಿರಾಕರಿಸಿದ್ದು, ಸೋಲಿಗೆ ಎಲ್ಲ ನಾಯಕರು ಜವಾಬ್ದಾರರಾಗಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪಕ್ಷ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರದ ಕುರಿತು ಚರ್ಚಿಸಲು ಇಂದು (ಮಂಗಳವಾರ) ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದೆ.

ಈ ಮಧ್ಯೆ, ಪಕ್ಷದ ಹೀನಾಯ ಸೋಲಿಗೆ ಕಾರಣಗಳೇನೆಂಬುದರ ಬಗ್ಗೆ ನಾಯಕರು ಆತ್ಮ ವಿಮರ್ಶೆಯಲ್ಲಿ ತೊಡಗಿದ್ದಾರೆ. ಚುನಾವಣಾ ಪ್ರಚಾರದ ವೇಳೆ ವಿಶ್ವಾಸದ್ರೋಹದ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿಗೆ ಪ್ರತ್ಯುತರ ನೀಡುವಲ್ಲಿ ಪಕ್ಷದ ನಾಯಕರು ವಿಫಲವಾಗಿರುವುದೇ ಸೋಲಿಗೆ ಪ್ರಮುಖ ಕಾರಣ ಎಂದು ಗೌಡರು ಅನಿಸಿಕೆ ವ್ಯಕ್ತಪಡಿಸಿದ್ದು, ನಾಯಕರು ಮತ್ತು ಅಭ್ಯರ್ಥಿಗಳ ಬಗ್ಗೆ ಸಿಟ್ಟಾಗಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಬಿಜೆಪಿಗೊಲಿದ ಐವರು ಪಕ್ಷೇತರರು
ಬಹುಮತದ ಅಂಚಿಗೆ ಬಂದು ನಿಂತ ಬಿಜೆಪಿ
ರೋಗಿಗಳಿಗೆ ಹಣ್ಣು ವಿತರಿಸಿ ವಿಜಯೋತ್ಸವ ಆಚರಿಸಿದ ಶಾಸಕ
ಬಿಜೆಪಿಯಿಂದ ಪಕ್ಷೇತರರಿಗೆ ಒತ್ತಡ: ಖರ್ಗೆ ಆರೋಪ
ಶಾಸಕಾಂಗ ಪಕ್ಷದ ಅಧ್ಯಕ್ಷರಾಗಿ ಯಡಿಯೂರಪ್ಪ ಆಯ್ಕೆ
ಬಿಜೆಪಿಗೆ ಹಿಗ್ಗಬೇಕಾದ ಅಗತ್ಯವಿಲ್ಲ: ಪೂಜಾರಿ