ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇ30ರಿಂದ ಶಾಲೆ ಪುನಾರಂಭ  Search similar articles
ರಾಜ್ಯದಲ್ಲಿ 2008-09ರ ಶೈಕ್ಷಣಿಕ ವರ್ಷದ ಶಾಲಾ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಈ ತಿಂಗಳ 30ರಂದು ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲೆ ಪ್ರಾರಂಭಗೊಳ್ಳಲಿದೆ.

ಈ ವಿಷಯವನ್ನು ಶಿಕ್ಷಣ ಇಲಾಖೆ ಆಯುಕ್ತ ಕುಮಾರ್‌ ನಾಯಕ್ ಸ್ಪಷ್ಟ ಪಡಿಸಿದ್ದಾರೆ. ರಾಜ್ಯದ 49 ಸಾವಿರ ಶಾಲೆಗಳು ಮೇ 30ರಂದೇ ಪ್ರಾರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಬೆಳಿಗ್ಗೆ 8.30ಕ್ಕೆ ಶಾಲೆ ಆರಂಭಗೊಳ್ಳಲಿದ್ದು, ರಾಜ್ಯಾದ್ಯಂತ ಬೆಳಿಗ್ಗೆ 9 ಗಂಟೆಗೆ ಶಾಲೆ ಪ್ರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

11ಲಕ್ಷ ಪ್ರಾಥಮಿಕ ಶಾಲಾ ಮಕ್ಕಳ ಹಾಜರಾತಿ ಇದ್ದು, 4ಕೋಟಿ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

70 ಶಾಲೆಗಳ ಮಾನ್ಯತೆ ರದ್ದ
ಈ ಮಧ್ಯೆ, ಭಾಷಾ ಮಾಧ್ಯಮ ನೀತಿ ಉಲ್ಲಂಘಿಸಿ ಸ್ವಇಚ್ಚಾ ಯೋಜನೆಯನ್ನು ಅಳವಡಿಸಿಕೊಳ್ಳದ ಬೆಂಗಳೂರಿನ ಸುಮಾರು 70 ಶಾಲೆಗಳ ಮಾನ್ಯತೆಯನ್ನು ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಈ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಬಾರದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಮತ್ತಷ್ಟು
ಧರಂ ಮಹಾರಾಷ್ಟ್ರ ರಾಜ್ಯಪಾಲ?
ಬಿಜೆಪಿಗೆ ಆರೂ ಪಕ್ಷೇತರರ ಬೆಂಬಲ
ಶುಕ್ರವಾರ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ
ಜೆಡಿಎಸ್ ಒಡಿಯುವ ಪ್ರಯತ್ನ: ಕುಮಾರಸ್ವಾಮಿ ಆರೋಪ
ಬಿಜೆಪಿಗೊಲಿದ ಐವರು ಪಕ್ಷೇತರರು
ಬಹುಮತದ ಅಂಚಿಗೆ ಬಂದು ನಿಂತ ಬಿಜೆಪಿ