ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಎಐಸಿಸಿ ಕಾರ್ಯದರ್ಶಿ ಪೃಥ್ವಿರಾಜ್ ಚೌಹಾಣ್ ಹಾಗೂ ದ್ವಿಗಿಜಯ್ ಸಿಂಗ್ ಅವರೇ ಪ್ರಮುಖ ಕಾರಣ ಎಂದು ಶಾಸಕ ವಿ. ಸೋಮಣ್ಣ ಕಿಡಿ ಕಾರಿದ್ದಾರೆ. ಈ ಮೂಲಕ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟು ಮತ್ತೆ ಭುಗಿಲೆದ್ದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಲ್ಲುವ ನಾಯಕರಿಗೆ ಟಿಕೆಟ್ ನೀಡದೆ ಹೈಕಮಾಂಡ್ ಹೆಸರಿನಲ್ಲಿ ತಮಗೆ ಬೇಕಾದವರಿಗೆ ಟಿಕೆಟ್ ಹಂಚಿಕೆ ಮಾಡಿದರು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಈ ಸೋಲಿಗೆ ಇವರೇ ಕಾರಣ. ಆದ್ದರಿಂದ ಇವರಿಬ್ಬರನ್ನು ತಕ್ಷಣ ಬದಲಾಯಿಸಬೇಕೆಂದು ಆಗ್ರಹಿಸಿದರು.
ಪಕ್ಷದಲ್ಲಿ ಸಮರ್ಥರನ್ನು ಗುರುತಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಎರಡನೇ ಹಂತದ ನಾಯಕರಿಗೂ ಅವಕಾಶ ನೀಡಬೇಕು. ಈ ಚುನಾವಣೆ ಮೂಲಕ ಕಾಂಗ್ರೆಸ್ಗೆ ಜನತೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದರೆ, ಪಕ್ಷದ ಭವಿಷ್ಯ ಕಷ್ಟ ಎಂದು ಅವರು ತಿಳಿಸಿದರು.
ಪಕ್ಷದ ಸಂಘಟನೆ ಹಾಗೂ ಕೆಲವು ನಾಯಕರ ಬೇಜಾವಾಬ್ದಾರಿಯಿಂದಾಗಿ ಪಕ್ಷದ ಹಿರಿಯ ನಾಯಕರೂ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಇದಕ್ಕೆ ರಾಜ್ಯ ಉಸ್ತುವಾರಿ ವಹಿಸಿರುವ ನಾಯಕರೇ ಕಾರಣ ಎಂದು ಅವರು ಆರೋಪಿಸಿದರು.
|